ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಆರ್ಥಿಕವಾಗಿ ಹಿಂದುಳಿದ ರಸ್ತೆ ಬದಿ ವ್ಯಾಪಾರಿಗಳಿಗೆ ಗುರುವಾರ ನಾಲ್ಕು ಚಕ್ರದ ತಳ್ಳು ಗಾಡಿಗಳನ್ನು ವಿತರಿಸಲಾಯಿತು. ಎಂ.ಆರ್.ಸತ್ಯನಾರಾಯಣ, ಡಿ.ನಾಗಭೂಷಣ್, ವಿನಯ್ ಕುಮಾರ್, ಸುವರ್ಣ, ಅನಂತು, ರಾಂರಾಜ್, ಬಸವಣ್ಣ, ಶಾಂತ, ಕೆ.ಮಂಗಳಾ, ರವೀಂದ್ರ, ಈರೇಗೌಡ, ಜ್ಞಾನೇಶ್, ಆನಂದ, ಬಾಲಾಜಿ, ಪವನ್, ನಂಜುಂಡ, ರವಿನಂದನ್, ಚಂದ್ರು, ಅಶ್ವಿನ್ ಕುಮಾರ್ ಇತರರು ಇದ್ದರು. 
ಜಿಲ್ಲೆ

ರಸ್ತೆ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ವಿತರಣೆ

ಮೈಸೂರು: ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಆರ್ಥಿಕವಾಗಿ ಹಿಂದುಳಿದ 10 ಫಲಾನುಭವಿಗಳಿಗೆ ರಸ್ತೆ ಬದಿ ವ್ಯಾಪಾರ ಮಾಡುವ ಉದ್ದೇಶದಿಂದ ನಾಲ್ಕು ಚಕ್ರದ ತಳ್ಳು ಗಾಡಿಗಳನ್ನು ವಿತರಿಸಲಾಯಿತು.

ನಗರದ ಡಿ.ದೇವರಾಜ ಅರಸು ರಸ್ತೆಯ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಘುಲಾಲ್ ಮತ್ತು ಕಂಪನಿ ಮಾಲೀಕ ರಾಘವನ್ ಅವರು ಕೊಡುಗೆಯಾಗಿ ನೀಡಿದ ಗಾಡಿಗಳನ್ನು ವಿಜಯವಾಣಿ ಪತ್ರಿಕೆ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಅವರು ಫಲಾನುಭವಿಗಳಿಗೆ ವಿತರಿಸಿ ಶುಭ ಕೋರಿದರು.

ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಜಿಲ್ಲಾಧ್ಯಕ್ಷ, ನಗರಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್ ಮಾತನಾಡಿ, ರಸ್ತೆ ಬದಿ ವ್ಯಾಪಾರ ಮಾಡುವ ಜನರಿಗೆ ಬಿಸಿಲು, ಮಳೆ, ಗಾಳಿಯಿಂದಾಗಿ ತೊಂದರೆ ಆಗುತ್ತಿತ್ತು. ಇದನ್ನು ಕಂಡು ನೆರಳಿನ ಆಶ್ರಯ ನೀಡಬೇಕು ಎಂದು ಬಯಸಿ ಸ್ನೇಹಿತರಾದ ರಘುಲಾಲ್ ಕಂಪನಿಯ ಮಾಲೀಕರಾದ ರಾಘವನ್ ಅವರಲ್ಲಿ ಕೋರಿದಾಗ 10 ತಳ್ಳುವ ಗಾಡಿಗಳನ್ನು ಕೊಡುಗೆ ನೀಡಿದ್ದು, ಅದಕ್ಕಾಗಿ ಅವರಿಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ವಾರ್ಡ್ ಸಂಖ್ಯೆ 18 ಹಾಗೂ 23ರಲ್ಲಿ ಇರುವ ಟೀ, ತಿಂಡಿ, ತರಕಾರಿ, ಬೋಂಡಾ, ಹಣ್ಣು, ತರಕಾರಿ, ಬಟ್ಟೆ ಇಸ್ತ್ರಿ ಮಾಡುವರು ಸೇರಿದಂತೆ ಬಡತನದಲ್ಲಿ ಇರುವವರನ್ನು ಗುರುತಿಸಿ ಗಾಡಿಗಳನ್ನು ನೀಡಲಾಗಿದೆ. ಈ ಮೂಲಕ ಅವರು ಆರ್ಥಿಕ ಮಟ್ಟ ಸುಧಾರಣೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶ ನಮ್ಮದು. ಈಗ ನೀಡಿರುವ ತಳ್ಳುವ ಗಾಡಿಗಳನ್ನು ತಮ್ಮ ವ್ಯಾಪಾರಕ್ಕೆ ಬಳಸಬೇಕು. ಏನಾದರೂ ಮಾರಾಟ ಮಾಡುವುದು, ಇತರರಿಗೆ ಬಾಡಿಗೆ ನೀಡುವುದು ಕಂಡುಬಂದರೆ ತಕ್ಷಣ ವಾಪಸ್ ಪಡೆದು ಅರ್ಹ ಇತರ ಫಲಾನುಭವಿಗಳಿಗೆ ನೀಡಲಾಗುವುದು ಎನ್ನುವ ಎಚ್ಚರಿಕೆ ನೀಡಿದರು.

ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್‌ಕುಮಾರ್, 19ನೇ ವಾರ್ಡ್‌ನ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣಾ, 23ನೇ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಅನಂತು, ಮುಖಂಡರಾದ ರಾಂರಾಜ್, ಬಸವಣ್ಣ, ಶಾಂತಾ, ಕೆ.ಮಂಗಳಾ, ರವೀಂದ್ರ, ಈರೇಗೌಡ, ಜ್ಞಾನೇಶ್, ಆನಂದ, ಬಾಲಾಜಿ, ಪವನ್, ನಂಜುಂಡ, ರವಿನಂದನ್, ಚಂದ್ರು, ಅಶ್ವಿನ್‌ಕುಮಾರ್ ಇತರರು ಇದ್ದರು.