ಹೊಳೆನರಸೀಪುರ ತಾಲೂಕಿನ ಅಗ್ರಹಾರ ಗೇಟ್‌ನ ರೈಸ್ ಮಿಲ್ ಸಮೀಪ ಎಫ್‌ಎಸ್‌ಟಿ ತಂಡ ಹಾಗೂ ಪೊಲೀಸರು ವಶಕ್ಕೆ ಪಡೆದ ಟ್ರ್ಯಾಕ್ಟರ್. 
ಜಿಲ್ಲೆ

ಗೀರೈಸ್, ಚಿಕನ್ ಚಾಪ್ಸ್ ವಿತರಣೆ

ನಾಗೇಶ ಎಸ್

ಹೊಳೆನರಸೀಪುರ: ತಾಲೂಕಿನ ಅಗ್ರಹಾರ ಗೇಟಿನ ರೈಸ್‌ಮಿಲ್ ಹತ್ತಿರ ಶನಿವಾರ ರಾತ್ರಿ 8.45ರ ಸುಮಾರಿಗೆ ಗೀರೈಸ್ ಹಾಗೂ ಚಿಕನ್ ಚಾಪ್ಸ್ ವಿತರಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಲೋಕಸಭಾ ಚುನಾವಣೆ ಹಿನ್ನ್ನೆಲೆಯಲ್ಲಿ ಶನಿವಾರ ರಾತ್ರಿ ಎಫ್‌ಎಸ್‌ಟಿ ತಂಡ ಗಸ್ತಿನಲ್ಲಿರುವಾಗ ಸಾರ್ವಜನಿಕರು ದೂರವಾಣಿ ಮೂಲಕ ಕರೆ ಮಾಡಿ ಅಗ್ರಹಾರ ಗೇಟಿನ ರೈಸ್ ಮಿಲ್ ಹತ್ತಿರ ಗೀರೈಸ್ ಹಾಗೂ ಚಿಕನ್ ಚಾಪ್ಸ್ ವಿತರಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಹೀಗಾಗಿ ಎಫ್‌ಎಸ್‌ಟಿ ತಂಡ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಎರಡು ಪಾತ್ರೆಯಲ್ಲಿ ಸುಮಾರು 500 ಜನರಿಗೆ ಆಗುವಷ್ಟು ಆಹಾರ ಸಂಗ್ರಹಣೆ ಮಾಡಿರುವುದು ಕಂಡು ಬಂದಿದೆ. ಇದರ ಹಿನ್ನೆಲೆಯಲ್ಲಿ 2 ದೊಡ್ಡ ಪಾತ್ರೆಗಳು ಹಾಗೂ ಟ್ರ್ಯಾಕ್ಟರ್ ವಶಕ್ಕೆ ಪಡೆದು, ಎಫ್‌ಎಸ್‌ಟಿ ತಂಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದೆ.