ಜಿಲ್ಲೆ

ಪರಿಹಾರಧನ ಆದೇಶ ಪತ್ರ ಹಸ್ತಾಂತರ

ಪ್ರಶಾಂತ ಹೂಗಾರ

ಅಥಣಿ: ಪಟ್ಟಣದ ತಾಸೆಗಲ್ಲಿಯಲ್ಲಿ ಮಳೆಯಿಂದ ಈಚೆಗೆ ಗೋಡೆ ಕುಸಿದು ಮೃತಪಟ್ಟ ಕಾಶೀನಾಥ ಅಪ್ಪಾಸಾಬ ಸುತಾರ (23) ಮನೆಗೆ ಶನಿವಾರ ಭೇಟಿ ನೀಡಿದ ಶಾಸಕ ಲಕ್ಷ್ಮಣ ಸವದಿ ಅವರು ವಾರಸುದಾರರಿಗೆ 5 ಲಕ್ಷ ರೂ. ಪರಿಹಾರಧನ ಆದೇಶ ಪತ್ರ ಹಸ್ತಾಂತರಿಸಿದರು.

ಅಥಣಿ ಪಟ್ಟಣದಲ್ಲಿ ಮಳೆಗೆ ಗೋಡೆ ಕುಸಿದು ಮೃತಪಟ್ಟ ಯುವಕನ ವಾರಸುದಾರರಿಗೆ ಸರ್ಕಾರದಿಂದ ಮಂಜೂರಾದ 5 ಲಕ್ಷ ರೂ.ಪರಿಹಾರಧನ ಆದೇಶ ಪ್ರತಿಯನ್ನು ಶಾಸಕ ಲಕ್ಷ್ಮಣ ಸವದಿ ಹಸ್ತಾಂತರಿಸಿದರು. ಬಿ.ಎಸ್.ಖಡಕಬಾವಿ, ಶ್ರೀಪಾದ ಜಲ್ದೆ ಇತರರಿದ್ದರು.

ಮೃತ ಯುವಕನ ತಂದೆ ಅಪ್ಪಾಸಾಬ ಮಹಾದೇವ ಸುತಾರ ಆದೇಶ ಪ್ರತಿ ಸ್ವೀಕರಿಸಿದರು. ತಹಸೀಲ್ದಾರ್ ಬಿ.ಎಸ್.ಖಡಕಬಾವಿ, ಕಂದಾಯ ನಿರೀಕ್ಷಕ ಎಸ್.ಬಿ.ಮೆಣಸಂಗಿ, ಗ್ರಾಮ ಲೆಕ್ಕಾಕಾರಿ ಎಂ.ಎಂ.ಮಿರ್ಜಿ, ಡಿವೈಎಸ್‌ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸೆ ಶಿವಶಂಕರ ಮುಕರಿ, ಮುಖಂಡರಾದ ರಾಜು ಬುಲಬುಲೆ, ನಿತಿನ ಗೊಂಗಡಿ, ರಾಮನಗೌಡ ಪಾಟಿಲ, ಪುರಸಭಾ ಸದಸ್ಯರಾದ ಸಂತೋಷ ಸಾವಡಕರ, ಕಲ್ಮೇಶ ಮಡ್ಡಿ ಇತರರಿದ್ದರು.