ಮೈಸೂರು: ಕೃಷ್ಣರಾಜ ಯುವ ಬಳಗದ ವತಿಯಿಂದ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುರುಬ ಸಮುದಾಯದವರಿಗೆ ಉಚಿತವಾಗಿ 10 ಕುರಿ ವಿತರಣೆ ಮಾಡಲಾಯಿತು.
ಭಕ್ತ ಕನಕದಾಸರ 535ನೇ ಜಯಂತಿ ಅಂಗವಾಗಿ ಕೃಷ್ಣರಾಜ ಯುವ ಬಳಗದ ವತಿಯಿಂದ ಮಂಗಳವಾರ ಕನಕ ವೃತ್ತ (ನಂಜುಮಳಿಗೆ ವೃತ) ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುರುಬ ಸಮುದಾಯದವರಿಗೆ ಉಚಿತವಾಗಿ ಕುರಿ ವಿತರಿಸಲಾಯಿತು.
ಚಾಮರಾಜನಗರದ ನಿವಾಸಿ ಮಹೇಶ್, ಕೆ.ಆರ್.ನಗರದ ಜಯಕೃಷ್ಣ, ನಂಜನಗೂಡು ತಾಲೂಕು ನಿವಾಸಿ ಪರಶಿವ, ಮೈಸೂರು ತಾಲೂಕಿನ ನಂದು, ವರುಣ ಕ್ಷೇತ್ರದ ಜಗನಹಳ್ಳಿ ಪಾಳ್ಯ ಭರತ್, ಕೊಳ್ಳೇಗಾಲ ತಾಲೂಕಿನ ನಿಂಗರಾಜು, ನರಸೀಪುರ ನಿವಾಸಿ ಪುಟ್ಟಸ್ವಾಮಿ, ಹುಣಸೂರು ನಿವಾಸಿ ಚೆನ್ನಪ್ಪ, ಬಿಳಿಕೆರೆಯ ರವಿ, ರವರಿಗೆ ಉಚಿತವಾಗಿ ಕುರಿ ವಿತರಿಸಲಾಯಿತು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ಮುಖಂಡ ಪ್ರದೀಪ್‌ಕುಮಾರ್, ನಗರ ಪಾಲಿಕೆ ಸದಸ್ಯ ಗೋಪಿ, ಕೃಷ್ಣರಾಜ ಯುವ ಬಳಗದ ಗೌರವಾಧ್ಯಕ್ಷ ಬಸವರಾಜ ಬಸಪ್ಪ, ಉದ್ಯಮಿ ರವಿ, ಮುಖಂಡರಾದ ನವೀನ್, ಮಂಜುನಾಥ್, ಜೋಗಿ ದೀಪು, ತೀರ್ಥ ಕುಮಾರ್ ಇತರರಿದ್ದರು.