ಗಂಗಾವತಿ ಮುಜಾವರ್ ಕ್ಯಾಂಪ್ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಕೃಷಿಕ ಸಮಾಜದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ದೇವಾಲಯದ ಮುಖ್ಯಸ್ಥೆ ಗಂಗಮ್ಮ, ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ರಾಮತ್ನಾಳ್, ಪದಾಧಿಕಾರಿಗಳಾದ ವೀರೇಶ ಮೈಲಿ,ಮಲ್ಲಪ್ಪ ಮಿಟ್ಟಲ್‌ಕೋಡ, ಇತರರಿದ್ದರು. 
ಜಿಲ್ಲೆ

ಕೇಂದ್ರದ ಯೋಜನೆಗಳನ್ನು ರೈತರಿಗೆ ತಲುಪಿಸಿ

ರುದ್ರಪ್ಪ ವಾಲಿ

ಗಂಗಾವತಿ: ರೈತರು ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕಿದ್ದು, ಅನ್ನದಾತರಿಗೆ ಬೆಂಬಲವಾಗಿ ನಿಲ್ಲುವಂತೆ ಕೃಷಿಕ ಸಮಾಜದ ಪದಾಧಿಕಾರಿಗಳಿಗೆ ಶ್ರೀ ರೇಣುಕಾ ಎಲ್ಲಮ್ಮದೇವಿ ದೇವಾಲಯದ ಮುಖ್ಯಸ್ಥೆ ಗಂಗಮ್ಮ ಹೇಳಿದರು.

ನಗರದ ಮುಜಾವರ್ ಕ್ಯಾಂಪ್ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಾಲಯದಲ್ಲಿ ಕೃಷಿಕ ಸಮಾಜದ ಪದಾಧಿಕಾರಿಗಳಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ರೈತರು ದೇಶದ ಬೆನ್ನೆಲುಬಾಗಿದ್ದು, ಕೃಷಿಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಯೋಜನೆ ಮತ್ತು ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಜವಾಬ್ದಾರಿ ಕೃಷಿಕ ಸಮಾಜದ ಪದಾಧಿಕಾರಿಗಳ ಮೇಲಿದೆ ಎಂದರು.

ಕಷಿಕ ಸಮಾಜದ ತಾಲೂಕು ಅಧ್ಯಕ್ಷ ಚನ್ನಪ್ಪ ಮಳಗಿ, ಉಪಾಧ್ಯಕ್ಷ ರಮೇಶ ಕುಲಕರ್ಣಿ, ಖಜಾಂಚಿ ಕುಮಾರೆಪ್ಪ ಸಿಂಗನಾಳ, ಸದಸ್ಯರಾದ ಅಮರೇಶ ಗೋನಾಳ, ದೇವಪ್ಪ ಹೂಗಾರ, ದುರ್ಗಪ್ಪ ಸಿಂಗನಾಳ, ಮಂಜುನಾಥ ಮಸ್ಕಿ, ವಾಸುದೇವ ನವಲಿ, ಲಿಂಗನಗೌಡ ಹೇರೂರು, ಬಸವನಗೌಡ ಹಣವಾಳ, ಮಲ್ಲಿಕಾರ್ಜುನ ಕೇಸರಟ್ಟಿ , ಹನುಮಂತಪ್ಪ ಉಪ್ಪಾರ, ಹನುಮಂತಪ್ಪ ನಾಯಕ ಮತ್ತು ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ನಾಗಲಿಂಗಪ್ಪ ಪತ್ತಾರ್ ಅವರನ್ನು ಸನ್ಮಾನಿಸಲಾಯಿತು. ಪದಾಧಿಕಾರಿಗಳಾದ ಚಂದ್ರಶೇಖರ, ಬಸವರಾಜ ಗೋಡಿನಾಳ, ವೀರೇಶಪ್ಪ ಉಡುಮಕಲ್, ವಿಶ್ವನಾಥ ಬುಳ್ಳಾ ಇತರರಿದ್ದರು.