ವಿಜಯಪುರ: ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.
ಇಲ್ಲಿನ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ವೈದ್ಯಕೀಯ ಘಟಕ ಹಾಗೂ ಕುಶಲಕರ್ಮಿಗಳ ಘಟಕದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯ ಕ್ಷೇತ್ರದ ಬಲವರ್ಧನೆಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಪಾರ ಯೋಜನೆಗಳನ್ನು ಜಾರಿಗೊಳಿಸಿದೆ. ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ಮಾತ್ರವಲ್ಲ, ಆಯಾ ಇಲಾಖೆಗಳಿಗೆ ಭೇಟಿ ನೀಡಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಕ್ರಮ ವಹಿಸಬೇಕೆಂದರು.
ಅಲ್ಲದೇ, ಕುಶಲಕರ್ಮಿಗಳಿಗಾಗಿ ಇರುವ ಯೋಜನೆಗಳನ್ನು ಅರ್ಹರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಸರ್ವರೂ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ಆಯಾ ಘಟಕದ ಪದಾಧಿಕಾರಿಗಳು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ರವಿಕುಮಾರ ಬಿರಾದಾರ, ವೈದ್ಯಕೀಯ ಘಟಕದ ಜಿಲ್ಲಾಧ್ಯಕ್ಷ ಡಾ. ಮಹೇಶ ಗಾಯಕವಾಡ, ಡಾ. ಸುರೇಶ ಕಾಗಲಕರ, ಡಾ. ಎಂ.ಪಿ. ಬಿರಾದಾರ, ಡಾ. ಅಬುಬಕರ ಮುಲ್ಲಾ, ಡಾ. ವಿಜಯಕುಮಾರ ಗೂಳಿ, ಡಾ. ಗುರಿಕಾರ ಪಕ್ಷ ಸಂಘಟನೆಯ ಕುರಿತು ಸಲಹೆ ನೀಡಿದರು.
ಡಾ. ಶರಣಬಸಪ್ಪ ಚೌರ, ಡಾ. ರಾಜೇಸಾಬ ಕಬಾಡೆ, ಡಾ. ಎಂ.ಬಿ. ಒಂಟಿ, ಡಾ. ಎಸ್.ಎನ್. ಸಾರವಾಡ, ಡಾ.ಎ. ಎ. ನಾಲಬಂದ, ಡಾ. ಶಿವನಗೌಡ ಪಾಟೀಲ, ಡಾ. ಸಲೀಮ ಮುಜಾವರ, ಡಾ. ಹಾಜಿಸಾಬ ಮುಲ್ಲಾ, ಡಾ.ಅಲ್ಲಾಬಕ್ಷ ಕಾಖಂಡಕಿ, ಡಾ.ಬಿ.ಎಸ್. ಶಿವಶಂಪಿ, ಡಾ. ದೇವೇಂದ್ರ ಪೂಜಾರಿ, ಡಾ.ಎಂ.ಜೆ. ಮುಜಾವರ, ಡಾ.ಐ.ಎ. ಮುಲ್ಲಾ, ಜಿಲ್ಲಾ ಕುಶಲ ಕರ್ಮಿಗಳ ಘಟಕದ ಅಧ್ಯಕ್ಷ ಭೀಮಪ್ಪ ಬಡಿಗೇರ, ಹಾಜಿಮಲಂಗ ಮುಲ್ಲಾ, ಬಸವರಾಜ ಕಂಬಾರ, ವಿಠೋಬಾ ಕೋಡತೆ, ಶಿವಕುಮಾರ ಪತ್ತಾರ, ಶ್ರೀಶೈಲ ನಾವಿ, ಸುನೀಲ ಕ್ಷತ್ರಿ, ಸರ್ಜನ್ ಕ್ಷತ್ರಿ ಮತ್ತಿತರರಿದ್ದರು. ಕರಕುಶಲಕರ್ಮಿಗಳ ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.