ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿನ ಸೋಮೇಶ್ವರ, ಶಂಭುಲಿಂಗೇಶ್ಚರ ದೇಗುಲ ಅಭಿವೃದ್ಧಿ ಕಾಮಗಾರಿಯನ್ನು ಅಪರ ಜಿಲ್ಲಾಧಿಕಾರಿ ಡಾ ಎಚ್.ಎಲ್. ನಾಗರಾಜು ವೀಕ್ಷಣೆ ಮಾಡಿದರು. ಇ.ರಾಜು, ಮಹದೇವು, ಶ್ರೀನಾಥ್, ಕರವೇ ಗುರುಮೂರ್ತಿ ಇತರರು ಇದ್ದರು.  
ಜಿಲ್ಲೆ

ಸಮುದಾಯ ಭವನ ಕಾಮಗಾರಿ ವಿಳಂಬ

ಮಾದೇಶ್ ತಿ.ನರಸೀಪುರ

ಕಿಕ್ಕೇರಿ: ಸಾಸಲು ಕ್ಷೇತ್ರದ ಅಭಿವೃದ್ಧಿಗೆ ಒಮ್ಮತದ ಸಹಕಾರ ನೀಡಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಹೇಳಿದರು.


ಹೋಬಳಿಯ ಸಾಸಲು ಕ್ಷೇತ್ರದ ಮುಜರಾಯಿ ದೇಗುಲಗಳಾದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲ ಮತ್ತಿತರ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿ, ಗುತ್ತಿಗೆದಾರರು ಕಾಮಗಾರಿ ವಿಳಂಬ ಮಾಡದೆ ತ್ವರಿತವಾಗಿ ಗುಣಮಟ್ಟದ ಕಾಮಗಾರಿ ಮೂಲಕ ದೇಗುಲ ನಿರ್ಮಾಣವನ್ನು ತ್ವರಿತಗೊಳಿಸಿ ಎಂದು ತಾಕೀತು ಮಾಡಿದರು.


ಸಮುದಾಯ ಭವನದ ಕಾಮಗಾರಿ ವಿಳಂಬವಾಗುತ್ತಿರುವುದು ಬೇಸರ ತಂದಿದೆ. 3ವರ್ಷವಾದರೂ ಇಲ್ಲಿನ ನೂತನ ಜೋಡಿ ರಥಗಳು ನಿರ್ಮಾಣವಾಗಿಲ್ಲ. ಈಗಾಗಲೇ ವಿಳಂಬವಾಗಿದ್ದು ತ್ವರಿತವಾಗಿ ರಥಗಳನ್ನು ಗುಣಮಟ್ಟದೊಂದಿಗೆ ನಿರ್ಮಿಸಿ ಎಂದು ರಥ ನಿರ್ಮಾಣಕರ್ತೃ ಶಿಲ್ಪಿಗೆ ಸೂಚನೆ ನೀಡಿರು.


ಪ್ರಮಾಣ ಮಾಡಿದ ವರ್ತಕರು: ಮುಜರಾಯಿ ದೇಗುಲ ಸ್ಥಳವನ್ನು ಶೀಘ್ರವಾಗಿ ತೆರವು ಮಾಡಲಾಗುವುದು ಎಂದು ಅಧಿಕಾರಿಗಳ ಮುಂದೆ ವರ್ತಕರು ಪ್ರಮಾಣ ಮಾಡಿದರು.


ಗ್ರಾಮಲೆಕ್ಕಿಗ ಪ್ರಸನ್ನ, ಇ.ರಾಜು, ಮಹದೇವು, ಶ್ರೀನಾಥ್, ಕರವೇ ಗುರುಮೂರ್ತಿ ಇತರರು ಇದ್ದರು.