ಜಿಲ್ಲೆ

ನೆಲೆ ನೀಡದಿದ್ದರೆ ಆತ್ಮಹತ್ಯೆ ಎಂದವರ ರಕ್ಷಣೆ

ಮೂಲ್ಕಿ: ತನಗೆ ನೆಲೆ ಒದಗಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ನೊಂದ ಹಿರಿಯ ಚೇತನಕ್ಕೆ ಮೂಲ್ಕಿ ಪೊಲೀಸರ ಸಹಾಯದಿಂದ ಬೈಲೂರಿನ ಹೊಸಬೆಳಕು ಆಶ್ರಮದಲ್ಲಿ ವಿಶು ಶೆಟ್ಟಿ ಅಂಬಲಪಾಡಿ ನೆಲೆ ಕಲ್ಪಿಸಿ ಸ್ಪಂದಿಸಿದ್ದಾರೆ.

ನೊಂದ ಹಿರಿಯ ಶಂಕರ ಭಂಡಾರಿ(62) ಮೂಲತಃ ಉಡುಪಿ ಅಲೆವೂರಿನವರಾಗಿದ್ದು,ಮೂಲ್ಕಿ ಪೊಲೀಸ್ ಠಾಣೆಗೆ ಬಂದು ನೋವು ತೋಡಿಕೊಂಡಿದ್ದರು. ಮೂಲ್ಕಿ ಪೊಲೀಸರು ಅವರನ್ನು ಸಂಬಂಧಿಕರ ವಶಕ್ಕೆ ಒಪ್ಪಿಸಲು ದಿನವಿಡೀ ಪ್ರಯತ್ನ ನಡೆಸಿದರೂ ಸಫಲರಾಗಲಿಲ್ಲ. ಕೊನೆಗೆ ವಿಶು ಶೆಟ್ಟಿಯವರಿಗೆ ಮಾಹಿತಿ ನೀಡಿ ಆಶ್ರಮದ ಮುಖ್ಯಸ್ಥರಲ್ಲಿ ಅನುಮತಿ ಪಡೆದು ಆಶ್ರಮಕ್ಕೆ ದಾಖಲಿಸಲಾಯಿತು. ಈ ವೃದ್ಧರ ಬಗ್ಗೆ ಸಹಾಯ ಸ್ಪಂದನೆ ನೀಡುವ ಸಂಬಂಧಪಟ್ಟವರು ಹೊಸಬೆಳಕು ಆಶ್ರಮ ಬೈಲೂರು ಸಂಪರ್ಕಿಸಬಹುದು ಎಂದು ಮೂಲ್ಕಿ ಪೋಲೀಸ್ ಮೂಲಗಳು ತಿಳಿಸಿವೆ.