ಚಿಕ್ಕಮಗಳೂರು: ರಾಷ್ಟçಭಕ್ತಿ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರೆ ರಾಣಾಪ್ರತಾಪ್. ಸರಿಸುಮಾರು ಐದುಶತಮಾನಗಳ ಹಿಂದೆ ಉತ್ತರಭಾರತದ ಅತಿರಥ-ಮಹಾರಥರೆನಿಸಿದ ವೀರರೆಲ್ಲ ಅಕ್ಬರ್ ಸಂಬAಧ ಹೊಂದಲು ತವಕಿಸುತ್ತಿದ್ದ ಸಂದರ್ಭದಲ್ಲಿ ಪುಟ್ಟ ಮೇವಾಡ ರಾಜ್ಯದ ದೊರೆ ರಾಣಾ ದೇಶ ಮತ್ತು ಧರ್ಮದ ಪರನಿಂತು ಹೋರಾಡಿದ ವೀರ ಇತಿಹಾಸವಿದೆ. ಆತನ ಕುದುರೆ ಚೇತಕ್ ಪ್ರತಿಕೃತಿ ಯೂರೋಪ್‌ನ ಸೊರೋಕ್ಕೊ ಮ್ಯೂಸಿಯಂನಲ್ಲಿ ಸ್ವಾಭಿಮಾನ ಸ್ವಾಮಿ ನಿಷ್ಠೆ ಸಾರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
ನಗರದ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ರಜಪೂತ ಮಂಡಳಿ ಆಯೋಜಿಸಿದ್ದ ರಾಷ್ಟçವೀರ ಮಹಾರಾಣಾ ಪ್ರತಾಪಸಿಂಗ್‌ಜೀ ೪೮೫ನೆ ಜಯಂತಿ ಮತ್ತು ಸಂಘದ ವಾರ್ಷಿಕೋತ್ಸವದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ಷಾತ್ರಬಲವಿಲ್ಲದೆ ರಾಷ್ಟçರಕ್ಷಣೆ ಕಷ್ಟಕರ ಎಂದು ಹೇಳಿದರು.
ಸಂಘರ್ಷ ಕ್ಷಾತ್ರ ಹೋರಾಟದ ಅರಿವಿಲ್ಲದ ಮಂದಿ ಭಾರತದ ಇತಿಹಾಸವನ್ನು ಸೋಲಿನ ಇತಿಹಾಸವೆಂದು ಬಿಂಬಿಸುವ ಯತ್ನ ನಡೆಸಿದ್ದಾರೆ. ವಾಸ್ತವವಾಗಿ ನಮ್ಮದು ಸಂಘರ್ಷ, ಭಕ್ತಿ, ತ್ಯಾಗ, ಪರಾಕ್ರಮ, ಧೈರ್ಯ-ಶೌರ್ಯದ ಇತಿಹಾಸ. ನಿರಂತರ ಸಂಗ್ರಾಮ ಮತ್ತು ಸಂಘರ್ಷದ ಹೋರಾಟ ನಡೆದಿರದಿದ್ದರೆ ನಮ್ಮ ಸ್ಮಿತೆ-ಅಸ್ಥಿತ್ವ ಕಳೆದುಕೊಳ್ಳುತ್ತಿz್ದೆÃವೆನೊ ಎಂದು ತಿಳಿಸಿದರು.
ನಾಲ್ಕುಗುಣಗಳ ಆಧಾರದಮೇಲೆ ಹಿಂದೆ ನಮ್ಮ ಸಮಾಜವನ್ನು ವರ್ಗೀಕರಣ ಮಾಡಲಾಗಿತ್ತು. ಗುಣವೇ ಇದಕ್ಕೆ ಆಧಾರವೇ ಹೊರತು ಹುಟ್ಟು ಅಲ್ಲ. ತಲೆಬಾಗಿ ಕಾಲಿಗೆ ಬೀಳುವ ಸಂಸ್ಕೃತಿ ನಮ್ಮ ಸಮಾಜ ವ್ಯವಸ್ಥೆಯಲ್ಲಿತ್ತು. ಮಹಾರಾಣಾನಂತಹ ಧೀರ-ಶೂರರ ವ್ಯಕ್ತಿತ್ವದ ಗುಣಗಾನ ಪ್ರೇರಣೆ ಪ್ರತಿ ಮಕ್ಕಳಿಗೆ ಸಿಗದಿದ್ದರೆ ನಮ್ಮದು ದುರ್ಬಲ ಸಮಾಜವಾಗುತ್ತದೆ. ಆತಂಕವಾದ ಹಲಾಲ್, ಲವ್‌ಜಿಹಾದಿಯಂಥ ಅನರ್ಥಗಳಿಗೆ ಅಸಹಾಯಕತೆ ನಮ್ಮ ಪ್ರತಿಕ್ರಿಯೆ ಆಗಬಾರದು. ರಾಷ್ಟç ಮತ್ತು ಸಮಾಜರಕ್ಷಣೆಗೆ ಸದಾ ಸನ್ನದ್ಧರಾದ ಸಮಾಜ ನಮ್ಮದಾಗಬೇಕು ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಟಿ.ಜಿ.ಸಂಗ್ರಾಮಸಿAಗ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಧೈರ್ಯ, ಸ್ಥೆÊರ್ಯಗಳಿಗೆ ಹೆಸರಾದ ಮಹಾರಾಣಾ ಯುವಜನಾಂಗಕ್ಕೆ ಪ್ರೇರಕ. ಮಹಾರಾಣಾ ೧೧೭ ಯುದ್ಧಗಳನ್ನು ಮಾಡಿದ ಇತಿಹಾಸವಿದೆ. ಬಾದಶ ಅಕ್ಬರ್ ವಿರುದ್ಧ ಪುಟ್ಟರಾಜ್ಯದ ರಾಜನಾಗಿ ಹೋರಾಡಿದ ಧೈರ್ಯಶಾಲಿ. ಅವನಂತೆಯೆ ನಮ್ಮ ಕನ್ನಡನಾಡಿನ ರಾಣಿಚೆನ್ನಮ್ಮ, ಅಬ್ಬಕ್ಕದೇವಿ, ಕೃಷ್ಣದೇವರಾಯ ಮತ್ತಿತರ ಹತ್ತಾರು ರಾಜರು ಮೊಘಲರ ವಿರುದ್ಧ, ಬ್ರಿಟಿಷರ ವಿರುದ್ಧ ಹೋರಾಡಿ ಆದರ್ಶರಾಗಿ ಮೆರೆದಿದ್ದಾರೆ ಎಂದರು.
ಸAಜೀವಿನಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ಎಸ್.ಶಾಂತಕುಮಾರಿ ಮಾತನಾಡಿ, ಶಿಕ್ಷಣದಿಂದ ಶೋಷಣೆ ಮುಕ್ತಿ. ಯಾವುದೇ ಸಮಾಜ ಅಭಿವೃದ್ಧಿ ಹೊಂದಲು ಶಿಕ್ಷಣವಂತರಾಗಬೇಕು ಎಂದರು.
ರಜಪೂತ ಮಂಡಳಿಯ ಅಧ್ಯಕ್ಷ ಎಸ್.ಎ.ಶಂಕರಸಿAಗ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇವಲ ೭೫ಕುಟುಂಬಗಳಿರುವ ರಜಪೂತರ ಸಂಘಟನೆ ನಾಲ್ಕು ದಶಕಗಳಿಂದ ನಡೆದಿದೆ. ಸ್ವಂತಕಟ್ಟಡ, ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ನಿವೇಶನ ಕೊಡಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಸಂಘದ ಹಿರಿಯ ಸದಸ್ಯ ಸಿಂದಿಗೆರೆಯ ಅಣ್ಣಪ್ಪಸಿಂಗ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕೋಶಾಧ್ಯಕ್ಷ ಬಿ.ಹರಿಸಿಂಗ್, ಉಪಾಧ್ಯಕ್ಷೆ ಹೇಮಾವತಿ ರಾಜುಸಿಂಗ್, ಜಿಲ್ಲಾ ಕಾರ್ಯದರ್ಶಿ ಹರೀಶಸಿಂಗ್, ಸಹಕಾರ್ಯದರ್ಶಿ ರೇಖಾ ಪುಷ್ಪಾರಾಜಸಿಂಗ್, ಸಂಘಟನಾ ಕಾರ್ಯದರ್ಶಿ ಗೀತಾ ಪ್ರಕಾಶಸಿಂಗ್, ನಿರ್ದೇಶಕರಾದ ಧರ್ಮಸಿಂಗ್, ಭೀಮಸಿಂಗ್, ನೇಮಸಿಂಗ್, ಕುಮಾರಸಿಂಗ್, ಗೋವಿಂದಸಿAಗ್, ಶೇಖರಸಿಂಗ್ ಮತ್ತಿತರರಿದ್ದರು.