ಅಳವಂಡಿ: ಯುವಕರು ದುಶ್ಚಟಗಳ ದಾಸರಾಗದೇ ಜೀವನ ನಡೆಸಬೇಕು ಎಂದು ಕೊಪ್ಪಳ ಅಂಚಲ್ ಅಭಿಯಾನದ ಖೇಲ್ಕುದ್ ಪ್ರಚಾರಕ ಶೇಖಪ್ಪ ವೀರಾಪುರ ತಿಳಿಸಿದರು.
ಸಮೀಪದ ಬೋಚನಹಳ್ಳಿ ಗ್ರಾಮದಲ್ಲಿ ಏಕಲ್ ವಿದ್ಯಾಲಯದಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಶನಿವಾರ ಮಾತನಾಡಿದರು.
ಯುವಕರು ದೇಶದ ಬೆನ್ನೆಲುಬು, ಇವರಲ್ಲಿ ದೇಶ ಮುನ್ನಡೆಸುವ ಶಕ್ತಿ ಇದೆ. ಕಾರಣ ಯುವಕರು ಸಮಯ ವ್ಯರ್ಥ ಮಾಡದೇ ಪರಿಶ್ರಮದ ಬದುಕು ಕಟ್ಟಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು. ಕ್ರೀಡೆಯಲ್ಲಿ ಸೋಲು- ಗೆಲುವನ್ನು ಲೆಕ್ಕಿಸದೇ ಪಾಲ್ಗೊಳ್ಳಬೇಕು ಎಂದರು.
ಪ್ರಮುಖರಾದ ಮುದಿಯಪ್ಪ ತಂಬ್ರಳ್ಳಿ, ಗೊಣೇಪ್ಪ ಬೆಟಗೇರಿ, ವೀರೇಶ ಗಂಗಣ್ಣವರ, ಹನುಮೇಶ ಆವೋಜಿ, ಪರಶುರಾಮ ಬೀರೂರ, ಬಸಣ್ಣ, ನಾಗನಗೌಡ, ರಮೇಶ ಬರದೂರ, ಹನುಮಗೌಡ, ಪ್ರಶಾಂತ ಇತರರು ಇದ್ದರು.