ಹೆಬ್ರಿ: ಸೋಲೆ ಗೆಲುವಿನ ಮೆಟ್ಟಿಲು, ಸ್ಪರ್ಧೆಯಲ್ಲಿ ಬಹುಮಾನ ಪಡೆಯದೇ ಇರುವುದಕ್ಕೆ ಕಾರಣ ಚಿಂತಿಸುವ ಅನಿವಾರ್ಯತೆ ಇದೆ. ವಿದ್ಯಾಭಾರತಿ ಹಲವಾರು ಶೈಕ್ಷಣಿಕ ಚಟುವಟಿಕೆ ತನ್ನ ಸಂಯೋಜಿತ ಸಂಸ್ಥೆಗಳಿಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಅಮೃತ ಭಾರತಿ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ ಕಿಣಿ ಹೇಳಿದರು.
ಅಮೃತ ಭಾರತಿ ವಿದ್ಯಾಲಯದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ 17ನೇ ವರ್ಷದ ಕ್ರೀಡಾಕೂಟದ ಸಮಾರೋಪದಲ್ಲಿ ಮಾತನಾಡಿದರು.
ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದೆಯೂ ಉತ್ತಮ ಕಾರ್ಯಕ್ರಮ ವಿದ್ಯಾರ್ಥಿಗಳಿಗೂ ಮತ್ತು ಶಿಕ್ಷಕರಿಗೆ ನೀಡುವಂತಾಗಲಿ ಎಂದರು.
ಸಮಗ್ರ ಪ್ರಶಸ್ತಿ ಅಮೃತ ಭಾರತಿ ವಿದ್ಯಾಲಯ ಪಡೆಯಿತು. ಸಂಸ್ಥೆ ಪ್ರಮುಖರಾದ ಅಪರ್ಣ ಆಚಾರ್, ಅನೀತಾ ಇದ್ದರು. ಅಕ್ಷತಾ ಮಾತಾಜಿ ಸ್ವಾಗತಿಸಿ. ಪಂಚಮಿ ಮಾತಾಜಿ ನಿರೂಪಿಸಿದರು. ನಿಶಾನ್ ಗುರೂಜಿ ವಂದಿಸಿದರು.