ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ 
ಜಿಲ್ಲೆ

ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಸೋಲು

ನವೀನ ಬಿ.ಎಂ

ಶಿವಮೊಗ್ಗ: ಎಐಸಿಸಿ ನಾಯಕ ರಾಹುಲ್ ಗಾಂಧಿ ಕಾಲಿಟ್ಟ ಕಡೆ ಕಾಂಗ್ರೆಸ್‌ಗೆ ಸೋಲು ನಿಶ್ಚಿತ. ಹಾಗಾಗಿ ಅವರು ಮೊದಲು ಶಿವಮೊಗ್ಗಕ್ಕೆ ಬರಲಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಬರಬೇಕು ಎಂಬುದು ನನ್ನ ಆಸೆ. ಅವರು ಎಲ್ಲಿಲ್ಲಿ ಕಾಲಿಟ್ಟದ್ದಾರೋ ಅಲ್ಲೆಲ್ಲ ಸೋತಿದ್ದಾರೆ. ಈಗ ಶಿವಮೊಗ್ಗಕ್ಕೆ ದಯವಿಟ್ಟು ಬರಲಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿನಿಮಾ ನಟರ ಬಗ್ಗೆ ನನಗೆ ಅಪಾರ ಗೌರವವಿದೆ. ನಟರನ್ನು ನೋಡಲು ಜನರು ಬರುತ್ತಾರೆಯೇ ವಿನಃ ಅವರು ಬಂದ ಮಾತ್ರಕ್ಕೆ ಕಾಂಗ್ರೆಸ್‌ಗೆ ಮತ ಕೊಡುವುದಿಲ್ಲ. ಹೀಗಾಗಿ ಶಿವಮೊಗ್ಗದಲ್ಲಿ ಕಾಂಗ್ರೆಸ್, ಬಿಜೆಪಿ ಪರಸ್ಪರ ಟೀಕೆ ಮಾಡಿಕೊಳ್ಳುವುದಿಲ್ಲ. ಇಬ್ಬರೂ ಸೇರಿ ನನ್ನನ್ನು ಟೀಕೆ ಮಾಡುತ್ತಿದ್ದಾರೆ. ಇವರಿಬ್ಬರ ಸೋಲು ಖಚಿತ ಎಂದರು.
ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶದಲ್ಲೂ ಬಿಜೆಪಿಗೆ ಹೆಚ್ಚು ಮತಗಳು ಬರುತ್ತಿವೆ ಎಂದರೆ ಅದಕ್ಕೆ ನರೇಂದ್ರ ಮೋದಿ ಕಾರಣ. ರಾಜ್ಯದಲ್ಲೂ ಮೋದಿ ಮುಖ ನೋಡಿಕೊಂಡು ಜನ ಬಿಜೆಪಿಗೆ ಮತ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಗೋಪಾಲ್, ಮಂಜುನಾಥ್, ರಾಜೇಂದ್ರ, ಮಾಜಿ ಮೇಯರ್ ಸುವರ್ಣಾ ಶಂಕರ್, ಲತಾ ಗಣೇಶ್, ಆರತಿ ಆ.ಮ.ಪ್ರಕಾಶ್, ಇ.ವಿಶ್ವಾಸ್, ರಾಜಣ್ಣ, ವಿದ್ಯಾ ಪ್ರೇಮ್ ಸುದ್ದಿಗೋಷ್ಠಿಯಲ್ಲಿದ್ದರು.