ಕುಣಿಗಲ್: ಕುಲಾಂತರ ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಿ ಅವರ ಜೀವನಕ್ಕೆ ಆಧಾರವಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗೆ ಕಪು$್ಪ ಚುಕ್ಕಿ ತರಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪುರಸಭೆ ಮಾಜಿ ಅಧ ರಂಗಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣ ಖಾಸಗಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಎಸ್ಕೆಡಿಆರ್ಡಿಪಿ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಆದರೆ ಧರ್ಮಸ್ಥಳ ಸಂಸ್ಥೆಯ ಯೋಜನೆಗಳು ತಲುಪುತ್ತಿದ್ದು, ಸಂಸ್ಥೆಯು ಬಡವರ ಆರ್ಥಿಕಮಟ್ಟ ಸುಧಾರಣೆಗೆ ಸಹಕಾರಿಯಾಗಿದೆ ಎಂದರು.
11.69 ಕೋಟಿ ರೂ. ಉಳಿತಾಯ: ಎಸ್ಕೆಡಿಆರ್ಡಿಪಿ ಯೋಜನಾಧಿಕಾರಿ ಸತೀಶ್ಶೆಟ್ ಮಾತನಾಡಿ, ಕುಣಿಗಲ್ ತಾಲೂಕಿನಲ್ಲಿ 2,719 ಸಂಗಳಿದ್ದು, 20,152 ಸದಸ್ಯರಿದ್ದಾರೆ. 11.69 ಕೋಟಿ ರೂ, ಉಳಿತಾಯ ಮಾಡಲಾಗಿದೆ, 82 ವಿದ್ಯಾರ್ಥಿಗಳಿಗೆ 30 ಲ ರೂ. ಶಿಷ್ಯವೇತನ, 79 ದೇವಸ್ಥಾನಗಳ ಜೀಣೋರ್ದ್ಧಾರಕ್ಕೆ 1.10 ಕೋಟಿ, 47 ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ 49.89 ಕೋಟಿ, ಹಿಂದು ರುದ್ರ ಭೂಮಿ ಅಭಿವೃದ್ಧಿಗೆ 2.30 ಲ, 12 ಕಲ್ಯಾಣ ಕಾಮಗಾರಿಗೆ 13.85 ಲ ರೂ. ಅನುದಾನ ವ್ಯಯಿಸಲಾಗಿದೆ. ಇದಲ್ಲದೆ 64 ಜನರಿಗೆ 1.82 ಲ ಉಪಕರಣ, 82 ನಿರ್ಗತಿಕ ಕುಟುಂಬಗಳಿಗೆ ತಿಂಗಳಿಗೆ ಒಟ್ಟು 82,500 ರೂ.ನಂತೆ ವರ್ಷಕ್ಕೆ 9.84 ಲ ರೂ. ಮಾಸಾಶನ ವಿತರಿಸಲಾಗುತ್ತಿದೆ ಎಂದು ಹೇಳಿದರು.
1.96 ಲ ರೂಪಾಯಿ ಕೋಟಿ ಸಾಲ ವಿತರಣೆ: ಎಸ್ಕೆಡಿಆರ್ಡಿಪಿ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ರಾಜ್ಯದಲ್ಲಿ 650 ಲ ಸಂಗಳಿದ್ದು, 55 ಲ 355 ಸದಸ್ಯರಿದ್ದಾರೆ. ಈವರೆಗೂ 1.96 ಲ ಕೋಟಿ ರೂ. ನೀಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ 10 ಸಾವಿರ ಕೋಟಿ ರೂ, ಕುಣಿಗಲ್ನಲ್ಲಿ ಒಂದು ಸಾವಿರ ಕೋಟಿ ರೂ. ಸಾಲ ನೀಡಲಾಗಿದೆ. ಸಾಲವನ್ನು ಬಿ.ಸಿ.ಟ್ರಸ್ಟ್ನಿಂದ ನೀಡುವುದಿಲ್ಲ, ಎಸ್ಬಿಐ ಬ್ಯಾಂಕ್ ಮೂಲಕ ನೀಡಲಾಗುವುದು, ಸೇವಾ ಪ್ರತಿನಿಧಿಯಾಗಿ ಧರ್ಮಸ್ಥಳ ಸಂಸ್ಥೆಯವರೇ ಕೆಲಸ ಮಾಡುವವರು ಎಂದು ಹೇಳಿದರು.