ಜಿಲ್ಲೆ

ಕೃಷಿ ಮಿತ್ರ ಗೊಬ್ಬರ ಕಳಪೆಯೆಂದು ದುರುದ್ದೇಶ ಪೂರ್ವಕ ಆರೋಪ, 10 ಜನರ ಮೇಲೆ ಮಾನನಷ್ಟ ಮೊಕದ್ದಮೆ

ಶಿರಸಿ: ಟಿಎಸ್​ಎಸ್ ಕೃಷಿ ವಿಭಾಗದಲ್ಲಿ ಮಾರಾಟ ಮಾಡಲಾಗುತ್ತಿದ್ದ ಕೃಷಿ ಮಿತ್ರ ಗೊಬ್ಬರ ಕಳಪೆ ಆಗಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಗೊಬ್ಬರ ನಿಗದಿತ ಮಾನದಂಡಕ್ಕೆ ಅನುಗುಣವಾಗಿದೆ ಎಂಬ ವರದಿ ಬಂದಿದೆ. ದುರುದ್ದೇಶ ಪೂರ್ವಕವಾಗಿ ಆಪಾದನೆ ಮಾಡಿದ್ದ 10 ಜನರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವಿನಯ ಹೆಗಡೆ ಕ್ಯಾದಗಿಮನೆ, ಮಹಾಬಲೇಶ್ವರ ಹೆಗಡೆ ಕಿರವಾಳ, ಪ್ರಶಾಂತ ಹೆಗಡೆ ಕಲಗದ್ದೆ, ಗೋಪಾಲಕೃಷ್ಣ ಹೆಗಡೆ ಅಮ್ಮಿನಳ್ಳಿ, ರಾಜೇಂದ್ರ ಭಟ್ಟ ಗೋಳಿಕೊಪ್ಪ, ವಿಘ್ನೕಶ್ವರ ಹೆಗಡೆ ಹಿರೇಸರ, ಸುಬ್ರಾಯ ಹೆಗಡೆ ಹಾರೂಗಾರ ಕಿಬ್ಬಳ್ಳಿ, ನಾಗಪತಿ ಹೆಗಡೆ ಶಿರಗೋಡ, ಮಂಜುನಾಥ ಭಟ್ಟ ಹೊಸ್ತೋಟ ಹಾಗೂ ಮಂಜುನಾಥ ಹೆಗಡೆ ಕುಂಬ್ರಿಜಡ್ಡಿ, ಇವರು ಟಿಎಸ್​ಎಸ್ ಕೃಷಿ ವಿಭಾಗದಲ್ಲಿ ಮಾರಾಟ ಮಾಡುತ್ತಿರುವ ಕೃಷಿ ಮಿತ್ರ(14-06-21) ಗೊಬ್ಬರವು ಕಳಪೆ ಎಂದು ಕೃಷಿ ಉಪನಿರ್ದೇಶಕರಲ್ಲಿ ದೂರು ನೀಡಿದ್ದರು. ಗೊಬ್ಬರದ ಮಾದರಿಯನ್ನು ತೆಗೆದು ಮಾನ್ಯತೆ ಪಡೆದ ಪ್ರಯೋಗಾಲಯಕ್ಕೆ ಪರೀಕ್ಷೆಗೆಂದು ಕಳುಹಿಸಿ ಕೊಟ್ಟಿದ್ದರು. ಕೃಷಿ ಅಧಿಕಾರಿ ಗೊಬ್ಬರ ಮಾರಾಟಕ್ಕೆ ತಡೆಯಾಜ್ಞೆಯನ್ನೂ ನೀಡಿದ್ದರು. ಈಗ ಹಿಂದೆ ನೀಡಿದ ತಡೆಯನ್ನು ತೆರವು ಮಾಡಿದ್ದಾರೆ. ಕೃಷಿ ಹಂಗಾಮಿನಲ್ಲಿ ಸಂಘದ ಸದಸ್ಯರಿಗೆ ಹಾಗೂ ಸಂಘಕ್ಕೆ ಹಾನಿ ಉಂಟು ಮಾಡಿದ ಮತ್ತು ಸಂಘದ ಘನತೆಗೆ ಧಕ್ಕೆ ತರಬೇಕೆಂದು ದುರುದ್ದೇಶ ಪೂರ್ವಕವಾಗಿ ಈ ಆಪಾದನೆ ಮಾಡಿದ್ದರು ಎಂದು ತಿಳಿಸಿರುವ ಸಂಸ್ಥೆ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದಿದೆ.