ಜಿಲ್ಲೆ

ಪಾಳುಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

Udupi

ಕುಂದಾಪುರ: ಕಂದಾವರ ಗ್ರಾಮ ಹೇರಿಕೆರೆ ಬಳಿ ಪಾಳುಬಿದ್ದ ಬಾವಿಗೆ ಬಿದ್ದ ಜಿಂಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ರಕ್ಷಿಸಿದ್ದಾರೆ.

ಹೇರಿಕೆರೆ ಬಳಿ ರಾಜೇಂದ್ರ ಎಂಬುವರ ಮನೆ ಸಮೀಪದ ಬಾವಿಗೆ ಜಿಂಕೆ ಬಿದ್ದಿದ್ದು ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.

ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಜಾಗರೂಕತೆಯಿಂದ ಮೇಲಕ್ಕೆತ್ತಿ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

ಉಪವಲಯ ಅರಣ್ಯಾಧಿಕಾರಿ ಉದಯ್, ಚಾಲಕ ಅಶೋಕ್, ಅರಣ್ಯ ವೀಕ್ಷಕ ಸೋಮಶೇಖರ್ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದು ಸ್ಥಳೀಯರು ಸಹಕಾರ ನೀಡಿದರು.