ಜಿಲ್ಲೆ

ಕಾರು ಡಿಕ್ಕಿಯಾಗಿ ಜಿಂಕೆ ಸಾವು

Dakshina Kannada

ಬೆಳ್ತಂಗಡಿ: ರಸ್ತೆ ದಾಟುವ ವೇಳೆ ಕಾರು ಡಿಕ್ಕಿಯಾಗಿ ಜಿಂಕೆ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಬೆಳಾಲು ಗ್ರಾಮದ ಬೈತಾಡಿ ಎಂಬಲ್ಲಿ ನಡೆದಿದೆ.
ಕಕ್ಕಿಂಜೆಯ ಸಿದ್ದಿಕ್ ಎಂಬುವರು ಉಪ್ಪಿನಂಗಡಿ ಕಡೆಗೆ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಠಾತ್ತನೆ ರಸ್ತೆ ದಾಟಲು ಜಿಗಿದ ಜಿಂಕೆ ಕಾರಿಗೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ.

ಸುಮಾರು 3 ವರ್ಷ ಪ್ರಾಯದ ಗಂಡು ಜಿಂಕೆಯಾಗಿದ್ದು, ಪುತ್ತೂರು ಅರಣ್ಯ ಉಪ ವಿಭಾಗದ ಎ.ಸಿ.ಎಫ್. ಕಾರ್ಯಪ್ಪ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ್, ಉಪ ಅರಣ್ಯಾಧಿಕಾರಿ ಪ್ರಶಾಂತ್, ಅರಣ್ಯ ರಕ್ಷಕ ವಿನಯ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿಗಳು ಜಿಂಕೆ ಮೃತದೇಹವನ್ನು ವಶಕ್ಕೆ ಪಡೆದು ಮಣ್ಣಗುಂಡಿ ಕಾಡಿನಲ್ಲಿ ಅಂತಿಮವಿಧಿ ನೆರವೇರಿಸಿದ್ದಾರೆ.