ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಂಕೆ ಕಳೇಬರ.  
ಜಿಲ್ಲೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಂಕೆ ಕಳೇಬರ

ಇಳಕಲ್ಲ(ಗ್ರಾ)(: ನಗರದ ಚಾಲುಕ್ಯ ಶಿಲ್ಪ ಕಲಾ ಕೇಂದ್ರದ ಬಳಿ ಸೊಲ್ಲಾಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ಜಿಂಕೆ ಕಳೇಬರ ಪತ್ತೆಯಾಗಿದೆ.

ಕಳೇಬರ ಗಮನಿಸಿದರೆ ಅದರ ಮೇಲೆ ಯಾವುದೇ ಗಾಯದ ಕುರುಹು ಕಾಣುತ್ತಿಲ್ಲ. ಇದು ಅಪಘಾತದಿಂದ ಮೃತಪಟ್ಟಿಲ್ಲ. ಅದರ ಸಾವಿನ ಬಗ್ಗೆ ಸಂದೇಹವಿದ್ದು, ಬೇಟೆಗಾರರು ಬೇಟೆಯಾಡಿ ರಸ್ತೆ ಮೇಲೆ ಕಳೇಬರ ಎಸೆದು ಹೋಗಿರಬಹುದು ಎಂದು ಪ್ರಾಣಿ ಪ್ರಿಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಹುನಗುಂದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.