ಜಿಲ್ಲೆ

ಶ್ರೀ ಕಾಳಾದ್ರಿ ಸಾನ್ನಿಧ್ಯದಲ್ಲಿ ದೀಪೋತ್ಸವ ಸಂಪನ್ನ

ಸೌಮ್ಯ ಆರ್

ಬಂಟ್ವಾಳ: ಸಜೀಪ ಮಾಗಣೆ ಬಿಲ್ಲಪದವು ಶ್ರೀ ಕಾಳಾದ್ರಿ ಸಾನ್ನಿಧ್ಯದಲ್ಲಿ ಒಂದು ತಿಂಗಳ ಕಾರ್ತಿಕ ದೀಪೋತ್ಸವ ಸಂಪನ್ನಗೊಂಡಿತು.

ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಪೌರೋಹಿತ್ಯ ವಹಿಸಿದ್ದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಭಂಡಾರಿ ಪುಣ್ಕೆಮಜಲು, ವೆಂಕಟೇಶ್ವರ ಭಟ್ ಮುಳ್ಳುಂಜ, ಗಣಪತಿ ಮಹಾಬಲೇಶ್ವರ ಭಟ್, ಈಶ್ವರಮಂಗಳ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಪೂಂಜ, ಕೆ.ರಾಧಾಕೃಷ್ಣ ಆಳ್ವ, ಪ್ರವೀಣ್ ಆಳ್ವ, ಪ್ರದೀಪ್ ಶೆಟ್ಟಿ, ಶಿವರಾಮ ಭಂಡಾರಿ, ಪ್ರದೀಪ್ ರೈ ಅಂಕದಕೋಡಿ, ಸೋಮನಾಥ ಭಂಡಾರಿ, ಸುಧಾಕರ ಕೆ.ಟಿ, ಶ್ರೀ ಪಣೋಲಿಬೈಲು ಕ್ಷೇತ್ರದ ಆಡಳಿತ ಅಧಿಕಾರಿ ದಿವಾಕರ ಮುಗುಳ್ಯ, ಕಿಶನ್ ಶೇಣವ ಮೊದಲಾದವರು ಉಪಸ್ಥಿತರಿದ್ದರು.

ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ದೇವಳದ ಅರ್ಚಕ ಗಣಪತಿ ಮಹಾಬಲೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು.