ಜಿಲ್ಲೆ

ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮ

Mangaluru - Hariprasad Rai


ಮಂಗಳೂರು : ನಮ್ಮ ಹಿರಿಯರ ವಿಚಾರ ಧಾರೆ ಎಂದಿಗೂ ಅನುಕರಣೀಯವಾಗಿದೆ. ದೇವಋಣ, ಋಷಿಋಣ ಹಾಗೂ ಪಿತೃ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ನಮ್ಮ ಹಿರಿಯರು ಪ್ರಕೃತಿ ಆರಾಧಕರಾಗಿದ್ದರು. ಆದರೆ ಪ್ರಸ್ತುತ ಹಣವೇ ಜೀವನವಾಗಿರುವುದು ದುರಂತವಾಗಿದೆ ಎಂದು ಯುವ ಸಾಹಿತಿ ಭರತೇಶ್ ಶೆಟ್ಟಿ ಎಕ್ಕಾರ್ ಹೇಳಿದರು.
ಮಂಗಳೂರಿನ ಸಂಸ್ಕಾರ ಭಾರತೀ ವತಿಯಿಂದ ಕುಲಶೇಖರದ ಜ್ಯೋತಿ ನಗರದ ಶರೀ ಧರ್ಮಶಾಸ್ತಾ ಮಂದಿರ ಟ್ರಸ್ಟ್ ಸಹಯೋಗದಲ್ಲಿ ಧರ್ಮ ಶಾಸ್ತ ಮಂದಿರದ ಆವರಣದಲ್ಲಿ ನಡೆದ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಶ್ರೀ ಧರ್ಮಶಾಸ್ತ ಮಂದಿರದ ಆಡಳಿತ ಟ್ರಸ್ಟಿ ರಾಮಪ್ರಸಾದ್ ಎಸ್. ಅಧ್ಯಕ್ಷತೆ ವಹಿಸಿದ್ದರು.
ತೊಕ್ಕೊಟ್ಟಿನ ಅಂಬಾವನ ಧರ್ಮ ಶಿಕ್ಷಣ ಕೇಂದ್ರ, ವಿಶ್ವ ಹಿಂದು ಪರಿಷತ್ ದೇರೆಬೈಲ್ ಕೊಂಚಾಡಿ ಖಂಡ ಸಮಿತಿ, ವಿಶ್ವ ಹಿಂದು ಪರಿಷತ್ ಭಜರಂಗ ದಳ, ಕೊಟ್ಟಾರ ಖಂಡ ಸಮಿತಿ ಹಾಗೂ ಬೋಳೂರಿನ ಅಕ್ಷಯ ಧರ್ಮ ಶಿಕ್ಷಣ ಕೇಂದ್ರಕ್ಕೆ ಸಂಸ್ಕಾರ ಭಾರತೀ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು .
ಸಂಸ್ಕಾರ ಭಾರತಿ ಮಂಗಳೂರು ಘಟಕದ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರ್ ಸ್ವಾಗತಿಸಿ, ಸತೀಶ್‌ಶೆಟ್ಟಿ ಕೊಡಿಯಾಲ್ಬೈಲ್ ವಂದಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಯಾನಂದ ಕತ್ತಲ್ಸಾರ್ ನೇತೃತ್ವದಲ್ಲಿ ತುಳುವಾಲ ಬಲಿಯೇಂದ್ರೆ ಯಕ್ಷಗಾನ ತಾಳಮದ್ದಳೆ ಜರಗಿತು. ಬಾಲಕೃಷ್ಣ ಕತ್ತಲ್ಸಾರ್ ಅವರು ಬಲೀಂದ್ರೆ ಲೆಪ್ಪು
ಕಾರ್ಯಕ್ರಮ ನಿರ್ವಹಿಸಿದರು.