ಜಿಲ್ಲೆ

ಅ.31ರಂದು ದೀಪಾವಳಿ ಕುಟುಂಬ ಮಿಲನ

Mangaluru - Hariprasad Rai


ಮಂಗಳೂರು : ಸಂಸ್ಕಾರ ಭಾರತೀ ಕರ್ನಾಟಕ ಇದರ ಮಂಗಳೂರು ಮಹಾನಗರ ಘಟಕದ ವತಿಯಿಂದ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮ ಅ.31ರಂದು ಸಾಯಂಕಾಲ 6.30ಕ್ಕೆ ಅಡ್ಯಾರ್ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ.
ಸಂಸ್ಕಾರ ಭಾರತೀ ಮಂಗಳೂರು ನಗರ ಅಧ್ಯಕ್ಷ ಪುರುಷೋತ್ತಮ .ಕೆ.ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ.ವೀರಾಂಜನೇಯ ಸ್ವಾಮಿ ದೇವಸ್ಥಾನದ ಗೌರವಾಧ್ಯಕ್ಷ ದಿವಾಕರ ನಾಯ್ಕ್ ಅಡ್ಯಾರ್ ಮತ್ತು ಅಧ್ಯಕ್ಷ ರಮೇಶ್ ತುಂಬೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿದ್ವಾಂಸ ದಾಮೋದರ ಶರ್ಮ ಬಾರ್ಕೂರು ಮುಖ್ಯ ಭಾಷಣ ಮಾಡಲಿದ್ದಾರೆ. ಸಂಸ್ಕಾರ ಭಾರತೀ ಸೇವಾ ಪುರಸ್ಕಾರವನ್ನು ಪ್ರದೀಪ್ ಕುಮಾರ್ ಶೆಟ್ಟಿ (ಆರ್‌ಎಸ್‌ಎಸ್ ಸ್ವಯಂ ಸೇವಕ ), ನಾರಾಯಣ ನಾಯ್ಕ್ (ಶಿಕ್ಷಕ), ಗಜೇಂದ್ರ ಪೂಜಾರಿ ( ಮಡಿಲು ಸಂಸ್ಥೆ ಅಧ್ಯಕ್ಷ),
ಮಾಧವ ಉಳ್ಳಾಲ್ (ಪರಿಸರ ), ರಮೇಶ್ ಕಾವೂರು ( ರಿಕ್ಷಾ ಚಾಲಕ), ಧನಂಜಯ ಕೊಟ್ಟಾರಿ ( ಯೋಗ ಗುರು )ಇವರುಗಳಿಗೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.