ಜಿಲ್ಲೆ

ಅ.20ರಂದು ಭಾವೈಕ್ಯತೆಯ ದೀಪಾವಳಿ ಸಂಭ್ರಮಾಚರಣೆ

Mangaluru - Hariprasad Rai




ಮಂಗಳೂರು : ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ನೇತೃತ್ವದಲ್ಲಿ 11ನೇ ವರ್ಷದ ಭಾವೈಕ್ಯತೆಯ ದೀಪಾವಳಿ
ಸಂಭ್ರಮಾಚರಣೆ ಅ.20ರಂದು ಮಧ್ಯಾಹ್ನ 3ರಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಅನಂತಪದ್ಮನಾಭ ಆಸ್ರಣ್ಣ ಅವರು ಉದ್ಘಾಟಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ ಜೆ.ನಾಗೇಂದ್ರ ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಭ್ರಮಾಚರಣೆ ಅಂಗವಾಗಿ ಜಾನಪದ ನೃತ್ಯ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಗೂಡುದೀಪ ಸ್ಪರ್ಧೆ ಹಮ್ಮಿಕೊಳ್ಳಲ್ಗಾದೆ.
ಜಾನಪದ ನೃತ್ಯ ಸ್ಪರ್ಧೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ 15 ವರ್ಷ ಮೇಲ್ಪಟ್ಟವರ ತಂಡಗಳಿಗೆ ಅವಕಾಶವಿದೆ. ಅ.18ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ವಿಜೇರತರಿಗೆ 10 ಸಾವಿರ ರೂ.(ಪ್ರ), 7 ಸಾವಿರ ರೂ.(ದ್ವಿ), 5 ಸಾವಿರ ರೂ.(ತೃ) ನಗದು ಬಹುಮಾನ ನೀಡಲಾಗುವುದು. ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಭಾಗವಹಿಸುವ ಅವಕಾಶವಿದೆ. ನೋಂದಣಿ ಅದೇ ದಿನ ಮಧ್ಯಾಹ್ನ 1.30ಕ್ಕೆ ಮಾಡಿಕೊಳ್ಳಬೇಕು. 5 ಸಾವಿರ ರೂ(ಪ್ರ), 3 ಸಾವಿರ ರೂ.(ದ್ವಿ) ಹಾಗೂ 2 ಸಾವಿರ ರೂ.(ತೃ) ನಗದು ಬಹುಮಾನದ ಜತೆಗೆ 4 ಶ್ರೇಣಿಗಳಲ್ಲಿ ಸ್ಪರ್ಧೆ ನಡೆದು ಎಲ್ಲ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
ಗೂಡುದೀಪ ಸ್ಪರ್ಧೆ ಸಾಯಂಕಾಲ 5.30ಕ್ಕೆ ಆರಂಭವಾಗಲಿದೆ. 10 ಸಾವಿರ ರೂ.(ಪ್ರ), 5 ಸಾವಿರ ರೂ.(ದ್ವಿ), 3 ಸಾವಿರ ರೂ(ತೃ) ನಗದು ಬಹುಮಾನದ ಜತೆಗೆ ಎಲ್ಲ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.
ಸಂಘಟಕರಾದ ಟಿ.ಡಿ. ವಿಕಾಸ್ ಶೆಟ್ಟಿ, ಕೆ.ಭಾಸ್ಕರ ರಾವ್, ಜೆ.ಆನಂದ್‌ಸೋನ್ಸ್, ಸತೀಶ್ ಪೆಂಗಲ್, ಇಮ್ರಾನ್ ಕುದ್ರೋಳಿ , ಪ್ರಗತಿ ಬೇಕಲ್ ಉಪಸ್ಥಿತರಿದ್ದರು.