ಜಿಲ್ಲೆ

7ರಂದು ದೀನ ದಯಾಳ್ ಸಂಘ ಶುಭಾರಂಭ

Avinash R

ಸುಳ್ಯ: ದೀನ ದಯಾಳ್ ಸಹಕಾರ ಸಂಘ ಡಿ.7ರಂದು ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್. ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಮಾಜಿ ಸಚಿವ ಎಸ್.ಅಂಗಾರ ತಿಳಿಸಿದರು.

ಶನಿವಾರ ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ ನೂತನ ಸಹಕಾರ ಸಂಘವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ.

ಸಂಸದ ಕ್ಯಾ.ಬ್ರಿಜೀಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದದ ಕಿಶೋರ್ ಕುಮಾರ್, ಮಂಜುನಾಥ ಭಂಡಾರಿ, ಟಿಎಪಿಸಿಎಂಎಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಸಹಕಾರ ಸಂಘಗಳ ಉಪನಿರ್ದೇಶಕ ರಮೇಶ್ ಎನ್.ಎಚ್., ಸಹಕಾರ ಸಂಘಗಳ ಸಹಾಯಕ ನಿರ್ದೇಶಕ ರಘು, ಸುಳ್ಯ ತಾಲೂಕು ಆರ್.ಎಸ್.ಎಸ್.ಸಂಘ ಚಾಲಕ ಚಂದ್ರಶೇಖರ ತಳೂರು, ಆರ್.ಎಸ್.ಎಸ್.ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಟಿಎಪಿಸಿಎಂಎಸ್ ಕಾರ್ಯದರ್ಶಿ ಜಯರಾಮ ದೇರಪ್ಪಜ್ಜನಮನೆ, ಸುಳ್ಯ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಮುಖ್ಯ ಅತಿಥಿಗಳಾಗಿರುವರು.

ಲೆಕ್ಕಪರಿಶೋಧಕರಾದ ಶ್ರೀಪತಿ ಭಟ್, ರಾಜ್ಯಮೊಗೇರ ಸಂಘ ಅಧ್ಯಕ್ಷ ನಂದರಾಜ ಸಂಕೇಶ, ಮೊಗೇರ ಅಧ್ಯನ ಟ್ರಸ್ಟ್ ಅಧ್ಯಕ್ಷ ಡಾ.ರಘು ಬೆಳ್ಳಿಪ್ಪಾಡಿ ಗೌರವ ಉಪಸ್ಥಿತರಿರುವರು. ಸುಳ್ಯದ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಸಭೆ ನಡೆಯುವುದು ಎಂದು ವಿವರ ನೀಡಿದರು.

ಪ್ರವರ್ತಕರಾದ ಜಿ.ಜಗನ್ನಾಥ ಜಯನಗರ, ಹರಿಶ್ಚಂದ್ರ ಹಾಸನಡ್ಕ ಗೋಷ್ಠಿಯಲ್ಲಿದ್ದರು.