ಜಿಲ್ಲೆ

ದೀನದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ

Avinash R

ಗುರುಪುರ: ಅಪ್ರತಿಮ ಸಂಟಕ, ಅಗ್ರಪಂಕ್ತಿಯ ಲೇಖಕ, ರಾಷ್ಟ್ರವಾದಿ ದಾರ್ಶನಿಕ, ವಾರ್ಗದರ್ಶಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವಾದ ಬುಧವಾರ ಭಾರತೀಯ ಜನತಾ ಪಾರ್ಟಿಯ ಕುಳವೂರು ಶಕ್ತಿ ಕೇಂದ್ರದ ವತಿಯಿಂದ ದೀನದಯಾಳ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಎಡಪದವು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಹಾಬಲ ಸಾಲ್ಯಾನ್, ಮುತ್ತೂರು ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಉಪಾಧ್ಯಕ್ಷೆ ಸುಷ್ಮಾ, ಕುಳವೂರು ಶಕ್ತಿ ಕೇಂದ್ರ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಕಾರ್ಯದರ್ಶಿ ಜಗದೀಶ್ ದುರ್ಗಾಕೋಡಿ, ಸದಸ್ಯರಾದ ಅಜಯ್ ಅಮೀನ್ , ದ.ಕ. ಜಿಲ್ಲಾ ಎಸ್.ಸಿ ಮೋರ್ಚಾದ ಉಪಾಧ್ಯಕ್ಷ ಹೊನ್ನಯ ಅಟ್ಟೆಪದವು, ಉತ್ತರ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕಂಗಿನಡಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.