ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿ ಸೇರಿ ಕನ್ನಡ ಸಾಹಿತ್ಯಕ್ಕೂ ನಾಡುಪ್ರಭು ಕೆಂಪೇಗೌಡರ ಕೊಡುಗೆ ಅಪಾರವಾದದ್ದು ಎಂದು ನಗರಸಭೆ ಅಧ್ಯಕ್ಷ ಎನ್.ಎಸ್.ಪೂರ್ಣಿಮಾ ಸುಗ್ಗರಾಜು ತಿಳಿಸಿದರು.
ನಗರದ ಪವಾಡ ಶ್ರೀಬಸವಣ್ಣ ದೇವರ ಮಠದಲ್ಲಿ ಕರ್ನಾಟಕ ಸಾಹಿತ್ಯ ಲೋಕಾ ಸಂಸ್ಥೆಯಿಂದ ನಾಡಪ್ರಭು ಕೆಂಪೇಗೌಡರ ಚತುರಂಗರಂಗ ತಜ್ಞ ಕೃತಿ ಲೋಕಾರ್ಪಣೆ ಪ್ರಯುಕ್ತ ದಸರಾ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬೆಂಗಳೂರು ನಿಮಾತೃ ನಾಡುಪ್ರಭು ಕೆಂಪೇಗೌಡರ ಸಾಧನೆ ಮಹತ್ವವಾದದ್ದು. ಕೆಂಪೇಗೌಡರ ಕಾಲಘಟ್ಟದಲ್ಲಿ ಮಾಡಿದ್ದ ಕೆರೆ ನಿರ್ಮಾಣ, ಪೇಟೆಗಳ ನಿರ್ಮಾಣ, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ, ಭಜನೆ ಮನೆ ನಿರ್ಮಾಣ, ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹ ಸೇರಿ ಸಾಕಷ್ಟು ವಿಚಾರಗಳನ್ನು ಇತಿಹಾಸದ ಮೂಲ ತಿಳಿಯಬಹುದು. ಕನ್ನಡ ಸಾಹಿತ್ಯ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಸಾಕಷ್ಟು ಮಂದಿ ಮಹನೀಯರು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಮಹನೀಯರ ಸಾಹಿತ್ಯಾಶಕ್ತಿಯನ್ನು ಯುಕವಿಗಳನ್ನು ಆಳವಡಿಕೆ ಮಾಡಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದರು.
ಕರವೇ ರಾಜ್ಯ ಉಪಾಧ್ಯಕ್ಷ ಜಿ.ಉಮೇಶ್, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಮೋಹನ್‌ಕುಮಾರ್, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಜಿ.ಗೋಪಾಲ್, ಕನ್ನಡ ಸಾಂಸ್ಕೃತಿಕ ರಂಗ ಅಧ್ಯಕ್ಷ ಡಿ.ಸಿದ್ದರಾಜು, ಗ್ರಾಮಪಂಚಾಯಿತಿ ಸದಸ್ಯ ಆನಂದ್, ಗುರುಸಾಯಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಆರ್.ತೀಥೇಶ್, ಕನ್ನಡ ಸಾಹಿತ್ಯ ಪರಿಷತ್ ನಗರ ಅಧ್ಯಕ್ಷ ಮಲ್ಲೇಶ್, ಚಲನಚಿತ್ರ ನಿರ್ಮಾಪಕ ಬೂದಿಹಾಳ್‌ಕಿಟ್ಟಿ, ಮುಖಂಡ ಕೇಶವ್ ಸಾಹಿತಿ ವೆಂಕಟೇಶ್.ಆರ್.ಚೌಥಾಯಿ, ಆನಂದ್.ವೈ.ಮೌರ್ಯ, ಡಾ.ಶಿವಲಿಂಗಯ್ಯ, ಶಿವಪ್ರಸಾದ್‌ಆರಾಧ್ಯ, ಸಿರಾಜ್ ಉಪಸ್ಥಿತರಿದರು.