ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಕೆರೆ ತುಂಬಿದ್ದರಿಂದ ಗುರುವಾರ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ವತಿಯಿಂದ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಲಾಯಿತು. ಕಮಿಟಿ ಚೇರ್ಮನ್ ಚನ್ನವೀರ ಮುಂಗುರವಾಡಿ, ವೈಸ್ ಚೇರ್ಮನ್ ವಿನಾಯಕ ಘೋಡ್ಕೆ, ಧರ್ಮದರ್ಶಿಗಳಾದ ಮಂಜುನಾಥ ಮುನವಳ್ಳಿ, ಉದಯಕುಮಾರ ನಾಯ್ಕ, ಗೀತಾ ಕಲಬುರ್ಗಿ, ವ್ಯವಸ್ಥಾಪಕ ಈರಣ್ಣ ತುಪ್ಪದ ಇತರರು ಇದ್ದರು.