ಜಿಲ್ಲೆ

ಜ್ಞಾನಮಯ ಪ್ರದೀಪ, ಘೋಷ್ ವಾದನ ಸಮರ್ಪಣೆ

Avinash R

ನೆಲ್ಯಾಡಿ: ಇಲ್ಲಿನ ಸೂರ್ಯ ನಗರ ಶ್ರೀರಾಮ ವಿದ್ಯಾಲಯ ಸದ್ವಿಚಾರ ಕಾರ್ಯಕ್ರಮ ಅಂಗವಾಗಿ ಜ್ಞಾನಮಯ ಪ್ರದೀಪ ಮತ್ತು ಘೋಷ್ ವಾದನಗಳ ಸಮರ್ಪಣೆ ಇತ್ತೀಚೆಗೆ ನಡೆಯಿತು.

ಬಿಎಸ್‌ಎಫ್ ನಿವೃತ್ತ ಕಮಾಂಡೆಂಟ್ ಚಂದಪ್ಪ ಮೂಲ್ಯ ಘೋಷ್ ವಾದನಗಳನ್ನು ಕೊಡುಗೆಯಾಗಿ ನೀಡಿದರು. ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪುಸ್ತಕ ವಿತರಿಸಿ ಶುಭ ಹಾರೈಸಿದರು.

sಪ್ರಮುಖರಾದ ಸುಬ್ರಾಯ ನಂದೋಡಿ ಭಗವದ್ಗೀತಾ ಸಂದೇಶ ನೀಡಿದರು. ಹಿಂದು ಪರ ಸಂಘಟನೆಯ ಪ್ರಮುಖ್ ಮೂಲಚಂದ್ರ ಕಾಂಚನ ಅಧ್ಯಕ್ಷತೆ ವಹಿಸಿದ್ದರು. ಜಯಂತ ಪೋರೋಳ ಉಪಸ್ಥಿತರಿದ್ದರು. ಆಡಳಿತ ಸಮಿತಿ ಸದಸ್ಯ ಸುಬ್ರಾಯ ಪುಣಚ ಪ್ರಾಸ್ತಾವಿಸಿದರು. ಶಿಕ್ಷಕಿ ಕಾವ್ಯಾ ಸ್ವಾಗತಿಸಿದರು. ಶಿಕ್ಷಕ ಗಣೇಶ್ ವಾಗ್ಲೆ ವಂದಿಸಿದರು. ಶಿಕ್ಷಕಿ ಶುಭರಾಣಿ ನಿರೂಪಿಸಿದರು.