ಜಿಲ್ಲೆ

ಸಂಕಲ್ಪದ ಗೀತಾ ಪುಸ್ತಕ ಸಮರ್ಪಿಸಿ

ಮರಿದೇವ ಹೂಗಾರ

ಹುಬ್ಬಳ್ಳಿ: ಸಮೀಪದ ವನಸಿರಿ ನಗರದ ಜಯತೀರ್ಥ ನಿಲೋಗಲ್ ಅವರ ನಿವಾಸಕ್ಕೆ ಉಡುಪಿ ಶ್ರೀಕೃಷ್ಣಮಠದ ಭಾವಿ ಪರ್ಯಾಯ ಪೀಠಾಧಿಪತಿ ಪುತ್ತಿಗೆ ಕಿರಿಯ ಶ್ರೀಗಳಾದ ಸುಶೀಂದ್ರ ತೀರ್ಥ ಶ್ರೀಪಾದಂಗಳು ಇತ್ತೀಚೆಗೆ ಭೇಟಿ ನೀಡಿದರು.
ಪೂಜಾದಿ ಕಾರ್ಯ ನೆರವೇರಿಸಿದ ಬಳಿಕ ಶ್ರೀಗಳು, ಭಗವದ್ಗೀತಾ-ಲೇಖನ ಯಜ್ಞದಲ್ಲಿ ಭಕ್ತರು ಭಾಗವಹಿಸಬೇಕು. ಸಂಕಲ್ಪ ಮಾಡಿ ಜ. 24ರಿಂದ 26ರವರೆಗೆ ಬರೆದ ಗೀತಾ ಪುಸ್ತಕವನ್ನು ಶ್ರೀಕೃಷ್ಣನ ಸನ್ನಿಧಿಗೆ ಸಮರ್ಪಿಸಬೇಕು ಎಂದು ಆಶೀರ್ವಚನ ನೀಡಿದರು.
ಪ್ರಮುಖರಾದ ರಘೋತ್ತಮ ಅವಧಾನಿ, ಡಾ. ಶ್ರೀನಾಥ, ಪ್ರೊ. ವಾಮನ ಭಾದ್ರಿ, ರಮೇಶ ಅಣ್ಣಿಗೇರಿ, ಸಂಜೀವ ಜೋಶಿ, ಗೋಪಾಲಾಚಾರ್ಯ ಹರಿಹರ, ಪ್ರಮೋದ ಸಿರಗುಪ್ಪಿ, ಆನಂದ ಬಹದ್ದೂರ ದೇಸಾಯಿ, ವಿಠ್ಠಲ ಅಂಬೇಕರ, ಸತ್ತೂರಿನ ನಾರಾಯಣ ಪಾರಾಯಣ ಬಳಗದ ಸದಸ್ಯರು ಇದ್ದರು.