ಕಡೂರಿನ ಕೆರೆಸಂತೆ ಮಹಾಲಕ್ಷ್ಮೀ ದೇವಾಲಯದಲ್ಲಿ ಶ್ರೀದೇವಿಗೆ ರಜತಾ ಅಭರಣದ ಅಲಂಕಾರ ಸಮರ್ಪಿಸಲಾಯಿತು 
ಜಿಲ್ಲೆ

ಲಕ್ಷ್ಮೀಗೆ ರಜತಾ ಆಭರಣದ ಅಲಂಕಾರ

ಕಡೂರು: ತಾಲೂಕಿನ ಕೆರೆಸಂತೆ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಶುಕ್ರವಾರ ಶ್ರೀದೇವಿಗೆ ವಿಶೇಷ ರಜತಾ ಆಭರಣದ ಅಲಂಕಾರದೊಂದಿಗೆ ಧಾರ್ಮಿಕ ಪೂಜಾ ಕೈಕಂರ್ಯಗಳು ಜರುಗಿದವು.
ಅಮ್ಮನವರಿಗೆ ಬೆಳಗ್ಗೆ ಪಂಚಾಮೃತಾ ಅಭಿಷೇಕ, ಸಹಸ್ರನಾಮ ಅರ್ಚನೆ, ಕುಂಕುಮ ಅರ್ಚನೆ, 101 ಎಡೆಸೇವೆ, ಸತ್ಯನಾರಾಯಣ ಸ್ವಾಮಿ ಪೂಜೆ, ಪರಿವಾರ ದೇವತೆಗಳಿಗೂ ಪೂಜಾ ಸಲ್ಲಿಸಲಾಯಿತು. ಕಳೆದ ತಿಂಗಳು ನೂತನವಾಗಿ ದೇವಸ್ಥಾನ ಜೀರ್ಣೋದ್ದಾರಗೊಂಡ ಬಳಿಕ ತಾಲೂಕಿನ ಹಾಗೂ ಸುತ್ತಮುತ್ತಲ ಭಾಗದ ಭಕ್ತರ ಸಂಖ್ಯೆ ಹೆಚ್ಚಳವಾಗಿತ್ತು. ವಿವಿಧ ಭಾಗಗಳಿಂದ ಬಂದಂತಹ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ದೇವಾಲಯದ ಸಮಿತಿಯಿಂದ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯ ಸಮತಿಯ ಅಧ್ಯಕ್ಷ ಕರಿಬಡ್ಡೆ ಶ್ರೀನಿವಾಸ್, ಸೋಮಶೇಖರ್ ಸೇರಿದಂತೆ ಸಮಿತಿ ಪದಾಧಿಕಾರಿಗಳು ಇದ್ದರು.