ಜಿಲ್ಲೆ

ಶಾಲೆ ತಳಿರುತೋರಣದಿಂದ ಅಲಂಕರಿಸಿ

ಗಾಯತ್ರಿ ಮಾಲಿಪಾಟೀಲ್

ಅಳವಂಡಿ: ಸ್ವಾತಂತ್ರೋತ್ಸವ ಕಾರ್ಯಕ್ರಮ ವಿವಿಧ ಇಲಾಖೆಯಿಂದ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಪಿಡಿಒ ಕೊಟ್ರಪ್ಪ ಅಂಗಡಿ ಹೇಳಿದರು.

ಸ್ಥಳೀಯ ಗ್ರಾಪಂ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾತಂತ್ರೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಧ್ವಜಾರೋಹಣ ನಿಮಿತ್ತ ಶಾಲೆ, ಕಾಲೇಜುಗಳಲ್ಲಿ ತಳಿರುತೋರಣ ಹಾಗೂ ರಂಗೋಲಿಯಿಂದ ಅಲಂಕರಿಸಬೇಕು. ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಜೈಘೋಷ ಕೂಗುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಪಂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ನಂತರ ಗ್ರಾಪಂನಲ್ಲಿ ಅಧ್ಯಕ್ಷರಿಂದ ಧ್ವಜಾರೋಹಣ ಹಾಗೂ ಮಕ್ಕಳಿಗೆ ಸಿಹಿ ವಿತರಿಸಲಾಗುವುದು. ಎಲ್ಲರೂ ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಎಂದರು.

ಸಿಆರ್‌ಪಿ ವಿಜಯಕುಮಾರ ಟಿಕಾರೆ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ಸದಸ್ಯರಾದ ಗುರುಬಸವರಾಜ, ಹನುಮಪ್ಪ, ನಾಗರಾಜ, ಹನುಮಂತ, ವಿಶ್ವನಾಥ, ರೇಣುಕಪ್ಪ, ಮಂಜುನಾಥ, ಗವಿಸಿದ್ದಪ್ಪ, ಗೌಸಬೀ, ರೇಣುಕಾರಡ್ಡಿ, ಸುವರ್ಣಾ, ಪ್ರಾಚಾರ್ಯ ಅಶೋಕ ಕೊಣ್ಣುರು, ಮುಖ್ಯಶಿಕ್ಷಕರಾದ ಮಾರುತಿ ಕಾತರಕಿ, ಜಯಾ ತಳಗೇರಿ, ನಾರಾಯಣ ಅಂಬೋರೆ, ಶಿವಗ್ಯಾನಮ್ಮ, ಸುನಂದಾ, ಭಾರತಿ, ಶಾರದಾ, ಶಿಕ್ಷಕರಾದ ಸುರೇಶ, ಹನುಮಂತ ಲಮಾಣಿ, ನೀಲಪ್ಪ ಹಕ್ಕಂಡಿ ಇತರರಿದ್ದರು.