ರಾಜ್ಯವನ್ನು ಬರ ಪೀಡಿತ ಎಂದು ಘೋಷಿಸಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಮುಂದೆ ಸಿಪಿಐಎಂನಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಪದಾಕಾರಿಗಳಾದ ಡಿ.ಎಸ್.ಶರಣಬಸವ, ಕರಿಯಪ್ಪ ಅಚ್ಚೊಳ್ಳಿ, ಪ್ರವೀಣರೆಡ್ಡಿ ಗುಂಜಳ್ಳಿ, ವರಲಕ್ಷ್ಮಿ, ನಾಗೇಂದ್ರ, ಜಿಲಾನಿ ಪಾಷಾ, ರಾಘವೇಂದ್ರ, ಖಾಸಿಂ, ಬಂದೇ ನವಾಜ ಇದ್ದರು. 
ಜಿಲ್ಲೆ

ರಾಜ್ಯವನ್ನು ಬರ ಪೀಡಿತ ಎಂದು ಘೋಷಿಸಿ

ರಾಚಯ್ಯ ಸ್ವಾಮಿ

ರಾಯಚೂರು: ರಾಜ್ಯವನ್ನು ಬರಪೀಡಿತ ಎಂದು ಘೋಷಿಸಿ ಎಲ್ಲ ತಾಲೂಕುಗಳಲ್ಲಿಯೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂಚೆ ಸಿಪಿಐಎಂನಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಕೂಲಿಕಾರರು, ಬಡ ರೈತರು ಕೆಲಸ ಅರಸಿ ಗುಳೆ ಹೋಗದಂತೆ ಉದ್ಯೋಗ ಖಾತ್ರಿ ಕೆಲಸವನ್ನು ಪ್ರತಿ ಕುಟುಂಬಕ್ಕೆ 150 ದಿನಗಳ ಕಾಲ ಕಡ್ಡಾಯವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಬೆಳೆ ನಷ್ಟಕ್ಕೆ ವಿಮೆ ದೊರೆಯುವಂತೆ ಮಾಡಬೇಕು. ಬಡ ರೈತರು ಮತ್ತು ಸೀಶಕ್ತಿ ಸಂಘಗಳ ಮಹಿಳೆಯರ ಸಾಲವನ್ನು ಮನ್ನಾ ಮಾಡಬೇಕು. ಶ್ರೀಮಂತ ರೈತರ ಸಾಲವನ್ನು ದೀರ್ಘಾವ ಸಾಲವಾಗಿ ಪರಿವರ್ತಿಸಬೇಕು ಮತ್ತು ಬಡ್ಡಿ ಮನ್ನಾ ಮಾಡಬೇಕು.
ಮುಂದಿನ ಬಿತ್ತನೆಗೆ ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಒದಗಿಸಬೇಕು. ಬಿತ್ತನೆ ಮತ್ತು ಕೊಯ್ಲು ಕೆಲಸಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ತರಬೇಕು. ಬರಗಾಲದ ಕಾರಣ ರೈತರ ಮಕ್ಕಳ ಶೈಕ್ಷಣಿಕ ಶುಲ್ಕವನ್ನು ಮನ್ನಾ ಮಾಡಬೇಕು.
ಆಹಾರಧಾನ್ಯಗಳ ಕೃತಕ ಅಭಾವ ಸೃಷ್ಟಿಸಿ ಗ್ರಾಹಕರನ್ನು ಸುಳಿಗೆ ಮಾಡುತ್ತಿರುವ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ ತಕ್ಷಣ ಎಕರೆಗೆ 35 ಸಾವಿರ ರೂ. ಪರಿಹಾರ ನೀಡಬೇಕು. ಮೇವಿನ ಅಭಾವ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಪದಾಕಾರಿಗಳಾದ ಡಿ.ಎಸ್.ಶರಣಬಸವ, ಕರಿಯಪ್ಪ ಅಚ್ಚೊಳ್ಳಿ, ಪ್ರವೀಣರೆಡ್ಡಿ ಗುಂಜಳ್ಳಿ, ವರಲಕ್ಷ್ಮಿ, ನಾಗೇಂದ್ರ, ಜಿಲಾನಿ ಪಾಷಾ, ರಾಘವೇಂದ್ರ, ಖಾಸಿಂ, ಬಂದೇ ನವಾಜ, ಮಹೆಬೂಬ್ ಪಾಲ್ಗೊಂಡಿದ್ದರು.