ವಿಜಯಪುರ: ಜಿಲ್ಲೆಯಲ್ಲಿ ಬರಗಾಲ ಘೋಷಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿದರು.
ನಂತರ ರೈತ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದ ಹಿನ್ನೆಲೆ ಬೆಳೆಗಳೆಲ್ಲ ಹಾನಿಯಾಗಿ ರೈತರು ಭೀಕರ ಬರಗಾಲಕ್ಕೆ ತುತ್ತಾಗಿದ್ದಾರೆ.
ರೈತರಿಗೆ ಕನಿಷ್ಠ ಕೂಲಿಯು ಸಿಗದೇ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ನೆರೆಯ ಮಹಾರಾಷ್ಟ್ರ, ಗೋವಾ ಮತ್ತಿತರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ರೈತರ ಜ್ವಲಂತ ಸಮಸ್ಯೆ ಪರಿಗಣಿಸಿ ಜಿಲ್ಲೆಯನ್ನು ತ್ವರಿತವಾಗಿ ಬರಗಾಲವೆಂದು ಘೋಷಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ರೈತರ ಕಷ್ಟಗಳಿಗೆ ಅಧಿಕಾರಿ ಮತ್ತು ಸರ್ಕಾರವೇ ನೇರ ಕಾರಣವಾಗಲಿದೆ ಎಂದು ಆರೋಪಿಸಿದರು.
ಸರ್ಕಾರ ಕೂಡಲೇ ಬರಗಾಲ ೂಷಿಸಿ ಎಕರೆಗೆ 25 ಸಾವಿರ ಪರಿಹಾರ ಧನ ಕೊಡಬೇಕು. ರೈತರಿಗೆ ಬಡ್ಡಿ ಇಲ್ಲದೇ ಸರ್ಕಾರದಿಂದ ಸಾಲ ಕೊಡಬೇಕು. ಉದ್ಯೋಗ ಖಾತ್ರಿ ಕೆಲಸ ನಡೆಯುತ್ತಿದ್ದು ಆದರೆ, ಕಾಮಗಾರಿಯಲ್ಲಿ ಯಂತ್ರ ಬಳಸುತ್ತಿರುವುದು ನಿಲ್ಲಿಸಿ 200 ದಿನ ಕೆಲಸ ಕೊಡಬೇಕು.
ಅಲ್ಲದೆ, ಅರಣ್ಯ ಭೂಮಿ ಸುಮಾರು ವರ್ಷದಿಂದ ಸಾಗುವಳಿ ಮಾಡುವವರಿಗೆ ಸರ್ಕಾರ ಹಕ್ಕು ಪತ್ರ ವಿತರಿಸಬೇಕು ಎಂದರು ಆಗ್ರಹಿಸಿದರು.
ರೈತ ಸಂದ ಮುಖಂಡ ರೇವಣಸಿದ್ಧ ಮಾಳಪ್ಪ ಪೂಜಾರಿ, ಹಣಮಂತ ಕಮದಾಳ, ಪ್ರದಿಪ ಬಬಲೇಶ್ವರ ಮತ್ತಿತರರಿದ್ದರು.