ಜಿಲ್ಲೆ

ಒಂದು ಸಾವಿರ ಸಸಿ ನೆಡಲು ತೀರ್ಮಾನ

ಬಸವರಾಜ ವೀರಪ್ಪ ಗರಗ

ಮುಂಡರಗಿ: ಇಲ್ಲಿನ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಅರಣ್ಯ ಇಲಾಖೆ, ಪುರಸಭೆ ಹಾಗೂ ಪರಿಸರ ಜಾಗೃತಿ ಸಂಘಟನೆ ಆಶ್ರಯದಲ್ಲಿ ಪಟ್ಟಣದಲ್ಲಿ ವಿಶ್ವ ಪರಿಸರ ದಿನ ಆಚರಿಸುವ ಕುರಿತು ಗುರುವಾರ ಪೂರ್ವಭಾವಿ ಸಭೆ ಜರುಗಿತು.

ಸಭೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ. 5ರೊಳಗಾಗಿ ಉದ್ಯಾನ, ರಸ್ತೆ ಬದಿ ಸೇರಿ ಇನ್ನಿತರ ಕಡೆಗಳಲ್ಲಿ ವಿವಿಧ ಬಗೆಯ ಒಂದು ಸಾವಿರ ಸಸಿಗಳನ್ನು ನೆಡುವುದರ ಬಗ್ಗೆ ತೀರ್ವನಿಸಲಾಯಿತು. ಇನ್ನೂ ಜೂ. 5ರಂದು ಬೆಳಗ್ಗೆ 8 ಗಂಟೆಗೆ ಬ್ಯಾಲವಾಡಗಿ ಸರ್ಕಲ್ ಬಳಿ 5 ಸಸಿಗಳನ್ನು ನೆಟ್ಟು ಅಲ್ಲಿಂದ ‘ನಮ್ಮ ನಡಿಗೆ ಪರಿಸರದ ಕಡೆಗೆ’ ಎಂಬ ಘೊಷ ವಾಕ್ಯದೊಂದಿಗೆ ನಡಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪರಿಸರ ಜಾಗೃತಿ ಜಾಥಾ ಮುಖಾಂತರ ಜಗದ್ಗುರು ಅನ್ನದಾನೀಶ್ವರ ಮಠದ ಆವರಣಕ್ಕೆ ತಲುಪಿ, ಅಲ್ಲಿ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರ ಸಾನ್ನಿಧ್ಯದಲ್ಲಿ ವಿಶ್ವ ಪರಿಸರ ದಿನದ ಕಾರ್ಯಕ್ರಮ ಆಚರಿಸುವುದು. ಇದರಲ್ಲಿ ಗದಗ ಡಿ.ಎಫ್.ಒ, ತಾಲೂಕಿನ ಎಲ್ಲ ಅಧಿಕಾರಿಗಳು ಮತ್ತಿತರರ ಪಾಲ್ಗೊಳ್ಳುವ ಬಗ್ಗೆ ನಿರ್ಧರಿಸಲಾಯಿತು.

ಪರಿಸರ ದಿನಾಚರಣೆ ಮತ್ತು ಪರಿಸರ ಸಂರಕ್ಷಣೆ ಕುರಿತಂತೆ ಗದಗ ಜಿಲ್ಲಾ ವನ್ಯಜೀವಿ ಪರಿಪಾಲಕ ಸಿ.ಎಸ್. ಅರಸನಾಳ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಜ.ಅ.ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ, ಪ್ರಮುಖ ಮಂಜುನಾಥ ಇಟಗಿ, ಆರ್​ಎಫ್​ಒ ಮಂಜುನಾಥ ಮೇಗಳಮನಿ, ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮಾತನಾಡಿದರು. ಸಾಹಿತಿ ಆರ್.ಎಲ್.ಪೊಲೀಸಪಾಟೀಲ, ಕಸಾಪ ತಾಲೂಕಾಧ್ಯಕ್ಷ ಎಂ.ಜಿ. ಗಚ್ಚಣ್ಣವರ, ನಿವೃತ್ತ ಉಪನ್ಯಾಸಕ ಎನ್.ಎಫ್. ಅಕ್ಕೂರ, ದೇವಪ್ಪ ಇಟಗಿ, ಆರ್.ವೈ.ಪಾಟೀಲ, ನಾಗರಾಜ ಮುರಡಿ, ಮನೋಜ ಕೋರ್ಪಡೆ, ಶ್ರೀಕಾಂತ ಎಂ.ಎಲ್., ದೇವರಡ್ಡಿ ಇಮ್ರಾಪೂರ, ಇತರರಿದ್ದರು.