ಎನ್.ಆರ್.ಪುರದಲ್ಲಿ ವಿದ್ಯುತ್ ಬಳಕೆದಾರರ ಸಂಘದ ಸಭೆಯಲ್ಲಿ ಅಧ್ಯಕ್ಷ ಬಿ.ಕೆ.ಜಾನಕೀರಾಮ್, ಪಿ.ಕೆ.ಬಸವರಾಜ್, ಮಾಳೂರುದಿಣ್ಣೆ ವಿನಾಯಕ, ಬಿ.ಪಿ.ಮೋಹನ, ನೀಲುವಾನಿ ರಂಗನಾಥ್ ಇತರರಿದ್ದರು. 
ಜಿಲ್ಲೆ

ಮೆಸ್ಕಾಂ ಸಭೆ ಕರೆಯಲು ತೀರ್ಮಾನ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಮೆಸ್ಕಾಂ ಹಿರಿಯ ಅಧಿಕಾರಿಗಳ ಸಭೆ ಕರೆಯಲು ವಿದ್ಯುತ್ ಬಳಕೆದಾರರ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿದ್ಯುತ್ ಬಳಕೆದಾರರ ಸಂಘದ ಅಧ್ಯಕ್ಷ ಬಿ.ಕೆ.ಜಾನಕೀರಾಮ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ವಿದ್ಯುತ್ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಮೆಸ್ಕಾಂ ಹಿರಿಯ ಅಧಿಕಾರಿಗಳೊಂದಿಗೆ ಜನಸಂಪರ್ಕ ಸಭೆ ಕರೆಯುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ವಿದ್ಯುತ್ ಬಳಕೆದಾರರ ಸಂಘದ ಗೌರವಾಧ್ಯಕ್ಷ ಮಾಳೂರುದಿಣ್ಣೆ ವಿನಾಯಕ ಮಾತನಾಡಿ, ವಿದ್ಯುತ್ ಬಳಕೆದಾರರ ಸಂಘ ವಿದ್ಯುತ್ ಸಮಸ್ಯೆಗೆ ಸೀಮಿತವಾಗದೆ ಜನಸಾಮಾನ್ಯರ ಮತ್ತು ವಿಶೇಷವಾಗಿ ರೈತರ ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಬೇಕು. ಇದರಿಂದ ಸಂಘದ ಹಿರಿಮೆ ಹೆಚ್ಚುತ್ತದೆ ಎಂದರು.
ಬಿ.ಕೆ.ಜಾನಕೀರಾಮ್ ಮಾತನಾಡಿ, ಹಿರಿಯರು, ಶಾಸಕರ ಮತ್ತು ಸರ್ಕಾರದ ಸಹಕಾರದಿಂದ ಗುಣಮಟ್ಟದ ವಿದ್ಯುತ್ ಮತ್ತು ಉಪ ವಿತರಣಾ ಕೇಂದ್ರಗಳನ್ನು ಅಗತ್ಯ ಮಾರ್ಗಗಳಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಮುಂದಿನ ವಾರದಲ್ಲಿ ನಿರೀಕ್ಷೆಯಷ್ಟು ಮಳೆ ಬಾರದೆ ಇದ್ದರೆ ರೈತರಿಗೆ ತೊಂದರೆ ಆಗಲಿದೆ. ಆದ್ದರಿಂದ ತಾಲೂಕನ್ನು ಬರ ಪೀಡಿತ ಎಂದು ಘೋಷಿಸಲು ಸರ್ಕಾರಕ್ಕೆ ಸಭೆಯಲ್ಲಿ ಆಗ್ರಹಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಪಿ.ಮೋಹನ್, ಬಾಳೆಹೊನ್ನೂರು ಹಿರಿಯಣ್ಣ, ಸುಂದರೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ನೀಲುವಾನಿ ರಂಗನಾಥ್, ವೈ.ಎಸ್.ರವಿ, ಸುನಿಲ್, ಎಚ್.ಜಿ.ಸುರೇಶ್, ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಪಿ.ಕೆ.ಬಸವರಾಜ್, ಪದಾಧಿಕಾರಿಗಳು ಇದ್ದರು.