ತಾಳಿಕೋಟೆ ಪಟ್ಟಣದ ವಿಠ್ಠಲ ಮಂದಿರದ ಸಭಾಭವನದಲ್ಲಿ ಶನಿವಾರ ಜನಿವಾರಧಾರಿ ಸಮಾಜದ ಮುಖಂಡರು ಸಭೆ ನಡಸಿದರು. ಶ್ರೀಧರ ಜೋಶಿ, ಶ್ರೀಧರ ಗ್ರಾಮ ಪುರೋಹಿತ, ಕಾಶಿರಾಯ ಮೋಹಿತೆ, ಜಿ.ಟಿ.ಘೋರ್ಪಡೆ, ಮುದಕಣ್ಣ ಬಡಿಗೇರ, ವಾಸುದೇವ ಹೆಬಸೂರ ಇತರರಿದ್ದರು. 
ಜಿಲ್ಲೆ

ಬೃಹತ್ ಪ್ರತಿಭಟನೆಗೆ ನಿರ್ಧಾರ

ದತ್ತಾತ್ರೇಯ ಪಿ ಕುಲಕರ್ಣಿ

ತಾಳಿಕೋಟೆ: ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಯಿಸಿದ ಘಟನೆ ವಿರುದ್ಧ ಜನಿವಾರಧಾರಿ ಸಮಾಜದವರಿಂದ ಏ.21ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಪಟ್ಟಣದ ಶ್ರೀವಿಠ್ಠಲ ಮಂದಿರದ ಸಭಾಭವನದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮುಖಂಡರಾದ ಕಾಶಿರಾಯ ಮೋಹಿತೆ, ಜಿ.ಟಿ.ಘೋರ್ಪಡೆ, ಮುದಕಣ್ಣ ಬಡಿಗೇರ, ವಾಸುದೇವ ಹೆಬಸೂರ, ವಸಂತ ಭಟ್ಟ ಜೋಶಿ ಮಾತನಾಡಿ, ಜನಿವಾರ ಅತ್ಯಂತ ಪವಿತ್ರವಾಗಿದೆ. ಸಿಇಟಿ ಪರೀಕ್ಷೆ ವೇಳೆ ಬೀದರ್, ಶಿವಮೊಗ್ಗ ಸೇರಿ ವಿವಿಧೆಡೆ ಹಲವು ಅಭ್ಯರ್ಥಿಗಳ ಜನಿವಾರ ತೆಗೆಸಿದ್ದು ಸಮಾಜವನ್ನು ಕೆರಳಿಸುವಂತೆ ಮಾಡಿದೆ. ಹೀನ ಕೃತ್ಯ ವಿರೋಧಿಸಿ ಹೋರಾಟ ನಡೆಸಲಾಗುವುದು ಎಂದರು.

ಜನಿವಾರಧಾರಿ ಸಮಾಜದ ಮುಖಂಡರಾದ ಶ್ರೀಧರ ಜೋಶಿ, ಶ್ರೀಧರ ಗ್ರಾಮ ಪುರೋಹಿತ, ವಿಜಯಕುಮಾರ ಮಹೇಂದ್ರಕರ, ಅಣ್ಣಾಜಿ ಜಗತಾಪ, ಗೋವಿಂದಸಿಂಗ್ ಗೌಡಗೇರಿ, ದತ್ತು ಉಭಾಳೆ, ವಿ.ಬಿ.ಲೋಕರೆ, ರವಿ ಚಂದುಕರ, ನಾರಾಯಣ ಸುಭೇದಾರ, ಮಾನಸಿಂಗ್ ಕೊಕಟನೂರ, ಪ್ರಮೋದ ಅಗರವಾಲಾ, ತಮ್ಮಣ್ಣ ದೇಶಪಾಂಡೆ, ಮಲ್ಲಾರಿ ಕುಲಕರ್ಣಿ, ಬಂಡು ದಾಯಪುಲೆ, ಪಿ.ಡಿ.ಧನಪಾಲ, ಸುನೀಲ ಕುಲಕರ್ಣಿ, ವಜ್ರಕುಮಾರ ಪ್ರಥಮಶೆಟ್ಟಿ, ಪ್ರಕಾಶ ಉಭಾಳೆ, ಶ್ರೀನಿವಾಸ ಸೋನಾರ, ಸುರೇಶ ಹಜೇರಿ, ಕಕ್ಕು ರಂಗ್ರೇಜ್, ಪ್ರಶಾಂತ ಜನಾದ್ರಿ, ಅರುಣ ಕನಕಗಿರಿ, ಸತ್ಯನಾರಾಯಣ ತಾಳಪಲ್ಲೆ, ಜೀತೇಂದ್ರ ಅಗರವಾಲಾ, ಡಾ.ರವಿ ಅಗರವಾಲಾ, ಪ್ರಭು ಗೋಗಿ, ರಾಜಣ್ಣ ಸೊಂಡೂರ, ಅಶೋಕ ಕುಲಕರ್ಣಿ, ತಮ್ಮಣ್ಣ ದೇಶಪಾಂಡೆ, ಹಣಮೇಶ ಕುಲಕರ್ಣಿ, ಶ್ರವಣಕುಮಾರ ಅಗರವಾಲಾ ಉಪಸ್ಥಿತರಿದ್ದರು.