ಜಿಲ್ಲೆ

ದೇಶದಲ್ಲಿ ಉದ್ಯೋಗ ನೀಡುವುದಾಗಿ ವಂಚನೆ

ಎನ್.ಆರ್.ಪುರ: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನಾ ನಿರುದ್ಯೋಗ ನಿವಾರಣೆಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತವೆ ಎಂದು ಸುಳ್ಳು ಹೇಳಿ ಯುವಕರಿಗೆ ಮೋಸ ಮಾಡಿದ್ದಾರೆ ಎಂದು ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರತನ್ ಗೌಡ ಅರಗಿ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಾಳೆಹೊನ್ನೂರು ಬ್ಲಾಕ್‌ಯುವ ಕಾಂಗ್ರೆಸ್ ಘಟಕದಿಂದ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಚುನಾವಣೆ ಪ್ರಾರಂಭವಾದ ನಂತರ 2009 ರವರೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಐದು ವರ್ಷಕ್ಕೊಮ್ಮೆ ಹೊಸ ಮತದಾರರು ಕನಿಷ್ಠ ಒಂದುವರೆ ಕೋಟಿಯಿಂದ ಗರಿಷ್ಠ ಮೂರು ಕೋಟಿಯವರೆಗೆ ಏರಿಕೆಯಾಗಿತ್ತು. 2014ರ ಚುನಾವಣೆಯಲ್ಲಿ ಮೋದಿ ಅಮಿತ್ ಷಾ ಬಂದ ನಂತರ ಏಕಾಏಕಿ 13 ಕೋಟಿ ಹೊಸ ಮತದಾರರು ಮತ ಚಲಾಯಿಸುತ್ತಾರೆ ಇದು ಹೇಗೆ ಎಂದು ಚುನಾವಣಾ ಆಯೋಗವೇ ತಿಳಿಸಬೇಕು ಎಂದು ಪ್ರಶ್ನಿಸಿದರು.

ಇಂದು ದೇಶದ ಪ್ರಧಾನ ಮಂತ್ರಿ ಅವರ ಜನ್ಮದಿನವನ್ನು ಯುವ ಕಾಂಗ್ರೆಸ್‌ನಿಂದ ನಿರುದ್ಯೋಗ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. ಅಧಿಕಾರಕ್ಕೆ ಬರುವ ಮೊದಲು ದೇಶದ ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುವುದಾಗಿ ಸುಳ್ಳು ಹೇಳಿ ದೇಶದ ಯುವಕರಿಗೆ ಮೋಸ ಮಾಡಿದ್ದಾರೆ ಈ ಸುಳ್ಳಿನ ಪ್ರಧಾನ ಮಂತ್ರಿಯವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಯುವಕಾಂಗ್ರೆಸ್‌ಮುಖಂಡರಾದ ಶ್ರೀಜಿತ್‌ಗೌಡ, ಅಭಿಲಾಷ್, ಮಹಮ್ಮದ್ ಕೈದ್, ಮಹಮ್ಮದ್ ಇಲಿಯಾಸ್, ಗೌತಮ್, ನಂದೀಶ, ದೇವರಾಜ್, ನಿತಿನ್, ವಿಜಯ ಮಂಜು ಇದ್ದರು.