ಜಿಲ್ಲೆ

ಮೈಸೂರು ಕ್ರೈಸ್ಟ್ ಕಾಲೇಜಿನಲ್ಲಿ ಗುರುವಾರ ಡೆಕೆನಿಯಲ್ ವಾರ್ಷಿಕೋತ್ಸವ

ಮೈಸೂರು: ಕ್ರೈಸ್ಟ್ ಕಾಲೇಜಿನಲ್ಲಿ ಗುರುವಾರ ಡೆಕೆನಿಯಲ್ ವಾರ್ಷಿಕೋತ್ಸವವನ್ನು (ಶೈಕ್ಷಣಿಕ ಶ್ರೇಷ್ಠತೆಯ ಹತ್ತು ವರ್ಷಗಳ ಆಚರಣೆ) ಮತ್ತು ಹೊಸ ಶೈಕ್ಷಣಿಕ ವರ್ಷದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳು ವಿವಿಧ ಧರ್ಮಗಳ ಪವಿತ್ರ ಗ್ರಂಥಗಳಿಂದ ಶ್ಲೋಕಗಳನ್ನು ಪಠಿಸಿದರು. ಮೂರನೇ ವರ್ಷದ ಬಿಎ ವಿದ್ಯಾರ್ಥಿನಿ ಪವಿತ್ರಾ ಬೈಬಲ್ ಪಠಿಸಿದರು. ಎರಡನೇ ವರ್ಷದ ಬಿಎ ವಿದ್ಯಾರ್ಥಿನಿ ಸ್ನೇಹಶ್ರೀ ಹೆಗ್ಡೆ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು. ಮೂರನೇ ವರ್ಷದ ಬಿಕಾಂ ವಿದ್ಯಾರ್ಥಿನಿ ಈಶಾ ಅಬ್ರಾನ್ ಕುರಾನ್ ವಾಚಿಸಿದರು.

ಸಂತ ಥಾಮಸ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಆಗಸ್ಟಿನ್, ಪ್ರಾಂಶುಪಾಲ ಜಿಂಟೋ ಜೋಸ್, ಉಪಪ್ರಾಂಶುಪಾಲ ರೇಜೋ ಜಾಕಬ್, ಅಕಾಡೆಮಿಕ್ ಸಹಸಂಚಾಲಕ ಡಬ್ಲೂೃ.ಎಸ್. ಜಾನ್ಸನ್ ಹಾಗೂ ಇತರರು ಇದ್ದರು.