ಅಳವಂಡಿಯಲ್ಲಿ ಹಮ್ಮಿಕೊಂಡಿದ್ದ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನದಲ್ಲಿ ಬಿಎಚ್ ಇಒ ಗಂಗಮ್ಮ ಮಾತನಾಡಿದರು. ಪ್ರಮುಖರಾದ ಶಂಕ್ರಮ್ಮ, ಕೊಟ್ರಪ್ಪ, ಬಸವರಾಜ, ಡಾ.ಚಂದ್ರಶೇಖರ, ಮಹಮ್ಮದ್, ರಾಘವೇಂದ್ರ, ನಾಗರಾಜ ಇತರರಿದ್ದರು. 
ಜಿಲ್ಲೆ

ಕ್ಷಯಮುಕ್ತ ಭಾರತ ನಿರ್ಮಾಣಕ್ಕೆ ಶ್ರಮಿಸಿ

ಅಳವಂಡಿ: ಕ್ಷಯ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇವರಿಂದ ಆರೋಗ್ಯವಂತರು ಅಂತರ ಕಾಪಾಡಿಕೊಳ್ಳಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಅಳವಂಡಿ ವತಿಯಿಂದ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನದಲ್ಲಿ ಶುಕ್ರವಾರ ಮಾತನಾಡಿದರು.

ಕ್ಷಯರೋಗ ಮೈಕ್ರೊ ಬ್ಯಾಕ್ಟಿರಿಯಂ ಟ್ಯೂಬರ್ ಕ್ಯೂಲಾಸಿಸ್ ಸೂಕ್ಷ್ಮಣುವಿನಿಂದ ತೀವ್ರಗತಿಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಉಸಿರಾಟ ಮೂಲಕ ಮಾನವನ ದೇಹ ಸೇರಿಕೊಂಡು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸೊಂಕಾಗಿ ಪರಿಣಮಿಸಿ, ರೋಗವಾಗಿ ಹೊರಹೊಮ್ಮುತ್ತದೆ.

ನಿಕ್ಷಯ್ ಪೋಷಣ್ ಯೋಜನೆಯಡಿ ದೃಢಪಟ್ಟ ಎಲ್ಲ ಕ್ಷಯರೋಗಿಗಳಿಗೆ ತಿಂಗಳಿಗೆ 1000ರೂ. ಡಿಬಿಟಿ ಮುಖಾಂತರ ಅವರ ಖಾತೆಗೆ ಕಳಿಸಲಾಗುವುದು. ದುಶ್ಚಟಗಳನ್ನು ತೊರೆದು ಆರೋಗ್ಯಕರ ಹವ್ಯಾಸ ಬೆಳೆಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸಿ. ಎಲ್ಲರೂ ಕ್ಷಯಮುಕ್ತ ಭಾರತ ನಿರ್ಮಿಸಲು ಶ್ರಮಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಪಿಡಿಒ ಕೊಟ್ರಪ್ಪ ಅಂಗಡಿ, ಕಾರ್ಯದರ್ಶಿ ಬಸವರಾಜ, ಪ್ರಾಥಮಿಕ ಆರೋಗ್ಯ ಕೇಂದ್ರ ವೈಧ್ಯಾದಿಕಾರಿ ಡಾ.ಚಂದ್ರಶೇಖರ ಮೇಟಿ, ಎಸ್‌ಟಿಎಸ್ ಮಹಮ್ಮದ್ ಇಬ್ರಾಹಿಂ, ಲ್ಯಾಬ್ ಟೇಕ್ನಿಸಿಯನ್ ನಾಗರಾಜ, ಎಸ್‌ವಿವೈಎಂ ರಾಘವೇಂದ್ರ ಇತರರಿದ್ದರು.