ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಿಂದ ಮಂಗಳವಾರ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಚಿಟ್ಟೆಬೆಟ್ಟು ಹರೀಶ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು.  
ಜಿಲ್ಲೆ

ಸಮಾಜಸೇವೆಯಿಂದ ಋಣ ಸಂದಾಯ

Karthika K.S

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಮಹಾತಾಯಿ ಅಕ್ಕಮ್ಮಾ ಶೆಟ್ಟಿ ಅವರ ಋಣ ತೀರಿಸುವ ಮೂಲಕ ಸಮಾಜದಸೇವೆ ಮಾಡಬೇಕು. ತಾಯಿ ತೋರಿದ ಆದರ್ಶದ ದಾರಿಯಲ್ಲೇ ನಡೆಯುವುದು ನಮ್ಮ ಧ್ಯೇಯ ಎಂದು ಉದ್ಯಮಿ ಯಳಗೋಳಿ ಚಿಟ್ಟೆಬೆಟ್ಟು ಹರೀಶ ಶೆಟ್ಟಿ ಹೇಳಿದರು.

ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಿಂದ ಮಂಗಳವಾರ ಆಯೋಜನೆಗೊಂಡ ಯಳಗೋಳಿ ಚಿಟ್ಟೆಬೆಟ್ಟು ಅಕ್ಕಮ್ಮಾ ಶೆಟ್ಟಿ 3ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

ಹರೀಶ ಶೆಟ್ಟಿ ಅವರು ಶಿವಪುರ ಶಾಲೆಗೆ ಸ್ಟೀಲ್ ಸ್ಟ್ಯಾಂಡ್ ಕೊಡುಗೆ ನೀಡಿದರು. ಯಳಗೋಳಿ ಚಿಟ್ಟೆಬೆಟ್ಟು ಹರೀಶ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ, ದಾನಿ ಎಚ್.ರಾಜೇಶ ನಾಯಕ್, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಸೀತಾನದಿ ನಾಗೇಶ ನಾಯಕ್, ಹೆಬ್ರಿ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ, ಉದ್ಯಮಿ ಪ್ರಕಾಶ ಶೆಟ್ಟಿ, ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಜನಾರ್ದನ್, ಅಕ್ಕಮ್ಮಾ ಶೆಟ್ಟಿ ಕುಟುಂಬಸ್ಥರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಕರು ಭಾಗವಹಿಸಿದ್ದರು. ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ದಿವಾಕರ ಮರಕಾಲ ಕಾರ್ಯಕ್ರಮ ನಿರೂಪಿಸಿದರು.