ಶಿವಮೊಗ್ಗ: ಒಂದು ಕೋಮಿನ ಸಂಪೂರ್ಣ ಬೆಂಬಲ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಆರಂಭದಿಂದಲೂ ಋಣ ಸಂದಾಯಕ್ಕೆ ಮುಂದಾಗಿದೆ. ಅದರ ಪರಿಣಾಮವೇ ನಾಗಮಂಗಲ ಗಣೇಶೋತ್ಸವದ ವೇಳೆ ನಡೆದ ಕೋಮು ಗಲಭೆ ಎಂದು ಬಿಜೆಪಿ ರಾಜ್ಯ ವಕ್ತಾರ ಮೋಹನ್ ವಿಶ್ವ ಅಭಿಪ್ರಾಯಪಟ್ಟರು.
ಕೆ.ಜೆ ಹಳ್ಳಿ, ಡಿ.ಜೆ ಹಳ್ಳಿ ಗಲಭೆಕೋರರನ್ನು ರಕ್ಷಿಸಿದ್ದು ಇದೇ ಕಾಂಗ್ರೆಸ್ ಸರ್ಕಾರ. ಮಸೀದಿ ಎದುರು ಗಣಪತಿ ಮೆರವಣಿಗೆ ನಡೆಸಬಾರದು ಎಂಬ ಕಾನೂನು ಎಲ್ಲಿದೆ? ಬೇರೆ ಯಾವುದೇ ಧರ್ಮದವರ ಧಾರ್ಮಿಕ ಆಚರಣೆಗೆ, ಹಬ್ಬ, ಮೆರವಣಿಗೆಗೆ ಇಲ್ಲದ ನಿರ್ಬಂಧ ಹಿಂದುಗಳ ಮೇಲೇಕೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿ, ತಲ್ವಾರ್ ಝಳಪಿಸಿದವರನ್ನು ಬಿಟ್ಟು ಗಣೇಶ ಮಂಡಳಿಯವರನ್ನೇ ಠಾಣೆಗೆ ಕರೆದೊಯ್ದಿದ್ದಾರೆ. ಇದು ಕಾಂಗ್ರೆಸ್‌ನ ಋಣ ಸಂದಾಯದ ಭಾಗವೇ ಆಗಿದೆ ಎಂದರು.