ಜಿಲ್ಲೆ

ಸಾಲ ಮಾಡಿ ಮನೆ ಕಟ್ಟಿ, ಮಗಳ ಮದುವೆ ಮಾಡಿದ ಮಹಿಳೆ ಆತ್ಮಹತ್ಯೆ

ಹಾವೇರಿ: ಸಾಲ ಮಾಡಿದ ಮನೆ ಕಟ್ಟಿ, ಮಗಳ ಮದುವೆ ಕೂಡ ಮಾಡಿದ್ದ ಮಹಿಳೆ ಸಾಲ ತೀರಿಸಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದೇವಗಿರಿ ಜನತಾ ಪ್ಲಾಟ್‌ನಲ್ಲಿ ನಡೆದಿದೆ.

ಕಮಲವ್ವ ನಿಂಗಪ್ಪ ಮಲ್ಲಮ್ಮನವರ (45) ಮೃತ ಮಹಿಳೆ.

ಮಹಿಳೆಯು ಮನೆ ಕಟ್ಟುವ ಸಲುವಾಗಿ ಹಾಗೂ ಮಗಳ ಮದುವೆ ಮಾಡುವುದಕ್ಕಾಗಿ ಬ್ಯಾಂಕ್, ಖಾಸಗಿ ಫೈನಾನ್ಸ್‌ನಲ್ಲಿ 3.15 ಲಕ್ಷ ರೂ. ಸಾಲ ಮಾಡಿದ್ದರು. ಆದರೆ, ಇತ್ತೀಚಿನ ದಿನದಲ್ಲಿ ದುಡಿಮೆ ಇಲ್ಲದ ಕಾರಣ ಸಾಲ ತೀರಿಸಲಾಗದೆ ತನ್ನ ವಾಸದ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.