ಜಿಲ್ಲೆ

ಹೊನ್ನಾಳಿ: ಸಾಲಬಾಧೆಯಿಂದ ರೈತ ಆತ್ಮಹತ್ಯೆ

Davangere - Desk - Basavaraja P

ಹೊನ್ನಾಳಿ: ತಾಲೂಕಿನ ಹರಳಹಳ್ಳಿಯ ರೈತ ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡಿ.ಕೆ. ಕಡೂರಪ್ಪ (45) ಆತ್ಮಹತ್ಯೆ ಶರಣಾದ ರೈತ. ಈ ಬಗ್ಗೆ ಅವರ ಪತ್ನಿ ಪುಷ್ಪಲತಾ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿ.ಕೆ. ಕಡೂರಪ್ಪ ಅವರು ತಮ್ಮ 2 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ, ಭತ್ತ ಬೆಳೆಯುತ್ತಿದ್ದರು. ಬೀಜ, ಔಷಧ, ಗೊಬ್ಬರ ಹಾಗೂ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಲು ಕೈಗಡ 5 ಲಕ್ಷ ರೂ.ಗಿಂತ ಅಧಿಕ ಸಾಲ ಮಾಡಿದ್ದರು.

ತಾಲೂಕಿನ ದೇವನಾಯಕನಹಳ್ಳಿ ಪತ್ತಿನ ಸಹಕಾರ ಸಂಘದಲ್ಲೂ ಸಾಲ ತೆಗೆದುಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಳೆ ಬೆಳೆ ಇಲ್ಲದೆ ಸಾಲ ತೀರಿಸುವ ದಾರಿ ತಿಳಿಯದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಡೂರಪ್ಪ ಅವರಿಗೆ ಒಬ್ಬ ಪುತ್ರ, ಪುತ್ರಿ ಇದ್ದಾರೆ.