ರಾಯಚೂರು ನಗರಕ್ಕೆ ಮೂಲಭೂತ ಸೌಕರ್ಯ ಹೆಚ್ಚಿಸಲು ತೆರಿಗೆ ಸಂಗ್ರಹ ಸಾಮರ್ಥ ಹೆಚ್ಚಿಸುವ ಅನಿವಾರ್ಯತೆಯಿದ್ದು ತೆರಿಗೆ ಬಾಕಿಯಿರುವ ವಾಣಿಜ್ಯ ಮಳಿಗೆಗಳು ಸೇರಿದಂತೆ ವಾರ್ಡವಾರು ತಂಡ ರಚಿಸಿ ತೆರಿಗೆ ಸಂಗ್ರಹ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಜುಬಿನ್ ಮೋಹಪಾತ್ರ ಹೇಳಿದರು.
ನಗರದ ಪಾಲಿಕೆ ಕಚೇರಿಯಲ್ಲಿ ಶನಿವಾರ ಪಾಲಿಕೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸೇರಿದಂತೆ ಸದಸ್ಯರೊಂದಿಗೆ ಕರ ವಸೂಲಿ ಕುರಿತು ಕರೆದ ಸಭೆಯಲ್ಲಿ ಮಾತನಾಡಿ, ನಗರಸಭೆಯಿಂದ ಮಹಾನಗರಪಾಲಿಕೆಯಾಗಿ ಮೇಲ್ದರ್ಜೇಗೇರಿದ್ದರಿಂದ ಆಡಳಿತದಲ್ಲಿ ಬದಲಾವಣೆ ತರಬೇಕಿದೆ. ಸಮರ್ಪಕ ಕುಡಿಯುವ ನೀರು, ಸ್ವಚ್ಚತೆ, ಬೀದಿ ದೀಪಗಳ ನಿರ್ವಹಣೆ ವ್ಯವಸ್ಥೆಗೆ ಆದಾಯ ಮೂಲ ಹೆಚ್ಚಿಸುವ ಅನಿವಾರ್ಯತೆಯಿದೆ.
ಕಳೆದ ಮೂರು ತಿಂಗಳಲ್ಲಿ ಒಂದು ಕೊಟಿ ರೂ.ಮಾತ್ರ ತೆರಿಗೆ ಸಂಗ್ರಹವಾಗಿತ್ತು. ಆದರೆ ಕಂದಾಯ ವಿಭಾಗದ ಸಿಬ್ಬಂದಿಗಳನ್ನು ನಿರಂತರವಾಗಿ ತೊಡಿಗಿಸಿದ್ದರಿಂದ ಕೇವಲ ೧೦ ದಿನದಲ್ಲಿ ಒಂದು ಕೊಟಿ ೧೦ ಲಕ್ಷ ರೂ ಸಂಗ್ರಹವಾಗಿದೆ. ಅನೇಕ ವಾಣಿಜ್ಯ,ವ್ಯಾಪಾರಸ್ಥರಿಂದಲೂ ತೆರಿಗೆ ಬಾಕಿದೆಯಿದೆ. ೯ ಜನ ಮಾತ್ರ ಕರವಸೂಲಿಗಾರರಿದ್ದು, ಅವರು ಶೈಕ್ಷಣಿಕ ಅರ್ಹತೆ ಹೊಂದಿಲ್ಲ. ಕಾರಣ ಮತ್ತಷ್ಟು ತೆರಿಗೆ ಸಂಗ್ರಹಿಸಲು ಕಂದಾಯ ವಸೂಲಿ ತಂಡ ರಚಿಸಿ ವಾರ್ಡವಾರು ವಸೂಲಿಗೆ ಕ್ರಮವಹಿಸಬೇಕಿದೆ ದಕ್ಷತೆಯಿಂದ ಕೆಲಸ ಮಾಡುವ ಪೌರಕಾರ್ಮಿಕರು, ವಿವಿಧ ವಿಭಾಗದ ಸಿಬ್ಬಂದಿಗಳನ್ನು ಪ್ರೋತ್ಸಾಹಿಸುವ ಚಿಂತನೆ ಮಾಡುತ್ತಿರುವದಾಗಿ ಹೇಳಿದರು.
ನಗರಸಭೆ ಹಿರಿಯ ಸದಸ್ಯ ಜಯಣ್ಣ ಮಾತನಾಡಿ,ನಗರದಲ್ಲಿ ಸ್ಟೇಷನ್ ರಸ್ತೆಯಲ್ಲಿ ಮಾತ್ರ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಯಿತು. ನಗರ ಇತರೆ ಕಡೆಗಳಲ್ಲಿ ಪಾದಚಾರಿ ರಸ್ತೆಯಲ್ಲಿಯೇ ವ್ಯಾಪಾರಕ್ಕೆ ಅವಕಾಶ
ನೀಡಲಾಗುತ್ತಿದೆ. ನಗರ ಕೇಂದ್ರ ಬಸ್ ನಿಲ್ದಾಣದ ಇಕ್ಕೆಲ್ಲಗಳಲ್ಲಿ ಪಾದಚಾರಿ ರಸ್ತೆಯೇ ಇಲ್ಲ. ಮಕ್ಕಳು,ವೃದ್ದರು, ಮಹಿಳೆಯರು ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ. ವಾಹನ ದಟ್ಟಣೆಯಾಗುತ್ತಿದೆ. ಕೆಲವಡೆ ಮಾತ್ರ ತೆರವುಗೊಳಿಸಿದರೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತದೆ ಎಂದರು.
ಸದಸ್ಯರಾದ ಎನ್.ಶ್ರೀನಿವಾಸರೆಡ್ಡಿ,ಈ.ಶಶಿರಾಜ,ನರಸರೆಡ್ಡಿ, ದರೂರು ಬಸವರಾಜ ಮಾತನಾಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಸಾಜೀದ್ ಸಮೀರ್ ಅನೇಕರು ಇದ್ದರು.