ಕರ ವಸೂಲಾತಿ ಅಭಿಯಾನದಲ್ಲಿ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಪಿಡಿಒವಿ.ಜಿ.ಲೋಕೇಶ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯ ಶಬ್ಬೀರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.  
ಜಿಲ್ಲೆ

ಸುಂಟಿಕೊಪ್ಪದಲ್ಲಿ ಕರ ವಸೂಲಿ ಅಭಿಯಾನ

ಅಭಿನಯ್ ಎಚ್.ಎಂ

ಸುಂಟಿಕೊಪ್ಪ: ನೀರಿನ ದರ ಹಾಗೂ ಕರ ವಸೂಲಾತಿ ಅಭಿಯಾನಕ್ಕೆ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಹಾಗೂ ಪಿಡಿಒ ವಿ.ಜಿ.ಲೋಕೇಶ್ ಚಾಲನೆ ನೀಡಿದರು.

ಈ ಹಿಂದಿನಿಂದಲ್ಲೂ ಹಲವಷ್ಟು ಜನರು ನೀರಿನ ತೆರಿಗೆ ಹಾಗೂ ಮನೆಯ ಕಂದಾಯವನ್ನು ಪಾವತಿಸದೆ ಸಾವಿರಾರು ರೂ.ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಂಚಾಯಿತಿ ಸಿಬ್ಬಂದಿಗೆ ವೇತನ, ವಿವಿಧ ವಾರ್ಡ್‌ಗಳಿಗೆ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯುಂಟಾಗಿತ್ತು. ಅಲ್ಲದೆ ನೀರು ಸರಬರಾಜು, ವಿದ್ಯುತ್ ಬಿಲ್ ವಾರ್ಷಿಕವಾಗಿ ಲಕ್ಷಾಂತರ ರೂ.ಪಾವತಿಸಬೇಕಾಗಿದ್ದು, ಪಂಚಾಯಿತಿಗೆ ಅನುದಾನದ ಕೊರತೆ ಒಂದೆಡೆಯಾದರೆ ಸಂಪನ್ಮೂಲದ ಕೊರತೆ ಮತ್ತೊಂದೆಡೆ ಬಹಳವಾಗಿ ಕಾಡುತ್ತಿತ್ತು.

ಈ ದಿಸೆಯಲ್ಲಿ ಸಂಪನ್ಮೂಲವನ್ನು ಕ್ರೂಢೀಕರಿಸ ಬೇಕಾಗಿರುವುದರಿಂದ ಸಿಬ್ಬಂದಿ ಶ್ರೀನಿವಾಸ್ ಹಾಗೂ ಡಿ.ಎಂ.ಮಂಜುನಾಥ್ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಗ್ರಾಮಸ್ಥರು ತೆರಿಗೆ ಪಾವತಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯ ಶಬ್ಬೀರ್ ಮತ್ತಿತರರು ಇದ್ದರು.