ಜಿಲ್ಲೆ

ಕ್ರಿಯಾಶೀಲ ಚಟುವಟಿಕೆಗಳಿಂದ ನೆಮ್ಮದಿ: ತಾಪಂ ಇಒ ರಾಜಣ್ಣ ಅಭಿಪ್ರಾಯ

ಸೌಮ್ಯ ಆರ್

ಸುಳ್ಯ: ಪ್ರತಿಯೊಬ್ಬರೂ ಜೀವನದಲ್ಲಿ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಹೀಗೆ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಜೀವನದಲ್ಲಿ ನೆಮ್ಮದಿ ಕಾಣಬಹುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಹೇಳಿದರು.

ಬೆಳ್ಳಾರೆ ಗ್ರಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಬೆಳ್ಳಾರೆ ವಲಯ ಧನಲಕ್ಷ್ಮೀ ಸ್ತ್ರೀಶಕ್ತಿ ಗೊಂಚಲು ಸಮಿತಿ ಬೆಳ್ಳಾರೆ, ಲಕ್ಷ್ಮೀ ಸಂಜೀವಿನಿ ಗ್ರಾಪಂಮಟ್ಟದ ಒಕ್ಕೂಟ, ಸೆಲ್ಕೋ ಸೋಲಾರ್ ಲೈಟ್ಸ್ ಪ್ರೈ.ಲಿ ಮತ್ತು ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಆಶ್ರಯದಲ್ಲಿ, ಬೆಳ್ಳಾರೆ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಸಂವಾದದಲ್ಲಿ ಮಾತನಾಡಿದರು.

ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ ಉದ್ಘಾಟಿಸಿದರು. ಸರ್ಕಾರದ ಸಬ್ಸಿಡಿ ಯೋಜನೆ ಬಗ್ಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬೆಳ್ಳಾರೆ ಶಾಖೆಯ ಶಾಖಾ ವ್ಯವಸ್ಥಾಪಕ ನವೀನ್ ಎಚ್.ಪಿ. ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ನಮಿತಾ ಎಲ್.ರೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವೀಣಾ ಮೂಡಾಯಿತೋಟ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಉಷಾ ಪ್ರಸಾದ್, ಸೆಲ್ಕೋ ಏರಿಯಾ ಮ್ಯಾನೇಜರ್ ಪ್ರಸಾದ್, ಸುಳ್ಯ ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ರಾಜೀವಿ ಆರ್.ರೈ, ಮೆಸ್ಕಾಂ ಇಂಜಿನಿಯರ್ ಪ್ರಸಾದ್ ಕತ್ಲಡ್ಕ, ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತಾ, ಧನಲಕ್ಷ್ಮೀ ಸ್ತ್ರೀ ಶಕ್ತಿ ಗೊಂಚಲು ಅಧ್ಯಕ್ಷೆ ರೇಷ್ಮಾ ಡಿ, ಸ್ನೇಹಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಪೂರ್ಣಿಮಾ ಪಡ್ಪು, ಲಕ್ಷ್ಮೀ ಸಂಜೀವಿನಿ ಗ್ರಾಪಂ ಒಕ್ಕೂಟದ ಅಧ್ಯಕ್ಷೆ ನಳಿನಾಕ್ಷಿ ಉಪಸ್ಥಿತರಿದ್ದರು.

ಕೆಪಿಎಸ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪಿಡಿಒ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಸಂಜಯ್ ನೆಟ್ಟಾರು ಕಾರ್ಯಕ್ರಮ ನಿರೂಪಿಸಿದರು.