ಜಿಲ್ಲೆ

ಶಾಲೆ ಮಕ್ಕಳಿಗೆ ಚರ್ಚಾ ಸ್ಪರ್ಧೆ

Dharwada - Basavaraj Idli

ಹುಬ್ಬಳ್ಳಿ: ವಿದ್ಯಾರ್ಥಿಗಳು ವಿದ್ಯಾರ್ಜನೆಯ ಸಮಯದಲ್ಲಿ ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಜೀವನದಲ್ಲಿ ಗುರಿ ಸಾಧಿಸಲು ಪ್ರಯತ್ನ ಶೀಲರಾಗಬೇಕೆಂದು ಶ್ರೀನಗರದ ಪ್ರೌಢಶಾಲೆ ಸಮಿತಿ ಉಪಾಧ್ಯಕ್ಷ ಡಾ. ಜೆ.ವಿ. ಆಚಾರ ಹೇಳಿದರು.

ಶ್ರೀನಗರ ದೇಸಾಯಿ ನಾಡಗೀರ ಪ್ರೌಢಶಾಲೆಯ ಸಭಾಭವನದಲ್ಲಿ ನವನಗರದ ಸಂಕಲ್ಪ ಸೇವಾ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಅಂತರ್ಶಾಲಾ ಚರ್ಚಾ ಸ್ಪರ್ಧೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಕಲ್ಪ ಸೇವಾ ಸಂಸ್ಥೆಯ ಕಾರ್ಯದರ್ಶಿ ನಾಗರತ್ನ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಕಳೆದ 10 ವರ್ಷಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದು, ಇನ್ನಷ್ಟು ಸೇವೆಗೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದರು.

ಸ್ಪರ್ಧೆಯ ನಿರ್ಣಾಯಕರಾಗಿದ್ದ ಸಾಹಿತಿ ಸಿ.ಎಂ. ಚನ್ನಬಸಪ್ಪ ಹಾಗೂ ಸಾಮಾಜಿಕ ಕಾರ್ಯಕರ್ತೆ ಶೋಭಾ ನರಗುಂದ ಮಾತನಾಡಿ, ಸ್ಪರ್ಧಾಕಾಂಕ್ಷಿಗಳು ಪೂರ್ವ ತಯಾರಿ ಮಾಡುವುದು ಅಗತ್ಯ ಎಂದರು.

ವಿವಿಧ ಶಾಲೆಯ 30 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತನುಜಾ ಪ್ರಥಮ, ಸೌಮ್ಯ ದ್ವೀತಿಯ, ನಿರ್ಮಲಾ, ಶ್ವೇತಾ, ಜುವೇರಿಯಾ ಮೂವರು ವಿದ್ಯಾರ್ಥಿಗಳು ತೃತೀಯ ಸ್ಥಾನ ಹಂಚಿಕೊಂಡರು.

ಅನಸೂಯಾ ಕಂಠಿ ಹಾಗೂ ಓಂ ನಗರ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯ ನಿವೃತ್ತ ಶಿಕ್ಷಕ ಜಿ.ಎಲ್. ಸತ್ಯಣ್ಣವರ, ಉಪಾಧ್ಯ ಎಂ.ಬಿ. ಕಂಬಳಿ ಉಪಸ್ಥಿತರಿದ್ದರು.

ಈಶ್ವರಿ ಸಂಗಡಿಗರು ಪ್ರಾರ್ಥನೆ ಹಾಡಿದರು. ದುರ್ಗಾಶ್ರೀ ಸಂಗಡಿಗರು ನೃತ್ಯ ಪ್ರದರ್ಶಿಸಿದರು. ಅಂಜಲಿ ಸ್ವಾಗತಿಸಿದರು. ಮುಮ್ತಾಜ ಮುಲ್ಲಾ ವಂದಿಸಿದರು.