ಜಿಲ್ಲೆ

Bengaluru ಕಟ್ಟಡ ಕುಸಿತ ಕೇಸ್​; ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಮಾಲೀಕ ಅರೆಸ್ಟ್​

ಬೆಂಗಳೂರು: ನಗರದ (Bengaluru) ಹೆಣ್ಣೂರು ಪೊಲೀಸ್​ ಠಾಣೆ ವ್ಯಾಪ್ತಿಯ ಬಾಬುಸಾಬ್​ಪಾಳ್ಯದಲ್ಲಿ ಸಂಭವಿಸಿದ್ದ ಕಟ್ಟಡ ಕುಸಿತ ಪ್ರಕರಣಕ್ಕೆ (Building Collapse Case)  ಸಂಬಂಧಿಸಿದಂತೆ ಮೃತರ ಸಂಖ್ಯೆ 7ಕ್ಕೆ ಏರಿದ್ದು, ಪೊಲೀಸರು ಕಟ್ಟಡದ ಮಾಲೀಕನನ್ನು ಅರೆಸ್ಟ್​ ಮಾಡಿದ್ದಾರೆ.

ಬಂಧಿತರನ್ನು ಭೂವನ್​ ರೆಡ್ಡಿ ಎಂದು ಗುರುತಿಸಲಾಗಿದ್ದು, ಇವರು ಮೊದಲನೇ ಆರೋಪಿ ಮುನಿರಾಜಿರೆಡ್ಡಿಯ ಮಗ ಎಂದು ತಿಳಿದು ಬಂದಿದೆ. ಬಿಎನ್‌ಎಸ್ಎಸ್​ (BNSS), ಬಿಬಿಎಂಪಿ(BBMP), ರೇರಾ (Rera) ಹಾಗೂ ಸಂಬಂಧಿತ ಕಾಯ್ದೆಯಡಿ ಪೊಲೀಸರು FIR ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕಟ್ಟಡ ಕುಸಿತಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಸ್ಥಳದಲ್ಲಿ ಇನ್ನೋರ್ವನ ಮೃತದೇಹ ಪತ್ತೆಯಾಗಿದೆ. ಈ ಮೂಲಕ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಪೊಲೀಸರು ಬಿಎನ್​ಎಸ್​ಎಸ್​ 105, 125(A) 125(B), 270,3(5) ಬಿಬಿಎಂಪಿ ಆ್ಯಕ್ಟ್ 326, 327,328 RERA (u/s3) ಅಡ್ಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.