ಮಾಗಡಿ: ತಾಲೂಕಿನ ಕಳ್ಳಿಪಾಳ್ಯದ ಶ್ರೀ ಭಕ್ತ ಮುನ್ನೇಶ್ವರ ದೇವಾಲಯದ ಪಟ್ಟದ ಬಸವಣ್ಣ ಭಾನುವಾರ ಅನಾರೋಗ್ಯದಿಂದ ಅಸುನೀಗಿದೆ.
12 ವರ್ಷಗಳ ಹಿಂದೆ ಭಕ್ತರು ದೇವಾಲಯಕ್ಕೆ ದಾನವಾಗಿ ನೀಡಿದ್ದ ಬಸವಣ್ಣನಿಗೆ ನಂದಿ ಎಂದು ಹೆಸರಿಟ್ಟು ದೇವಾಲಯದ ಬಳಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಮುನ್ನೇಶ್ವರ ದೇವರಿಗೆ ಪೂಜೆ ಸಲ್ಲಿಸುವ ವೇಳೆ ಬಸವಣ್ಣ ನಮಿಸುತಿತ್ತು. ಬಸವಣ್ಣನಿಂದ ಸಾಕಷ್ಟು ಮಂದಿ ಒಳಿತು ಕಂಡಿದ್ದರು.
ಬಸವಣ್ಣನ ಪಾದ ನೀಡಿದರೆ ಭಕ್ತರು ಅಂದುಕೊಂಡ ಕಾರ್ಯನಡೆಯುತ್ತಿತ್ತು. ಬೆಂಗಳೂರು, ಮೈಸೂರು, ಮಂಡ್ಯ, ದಾವಣಗೆರೆ, ತುಮಕೂರು ಸೇರಿ ರಾಜ್ಯದ ಹಲವಡೆಯಿಂದ ಬಸವಣ್ಣನ ದರ್ಶನಕ್ಕೆ ಆಗಮಿಸುತ್ತಿದ್ದರು.
ಬಸವಣ್ಣ ಮೃತಪಟ್ಟ ವಿಷಯ ತಿಳಿದ ಸಾವಿರಾರು ಮಂದಿ ಭಕ್ತರು ಆಗಮಿಸಿ ದರ್ಶನ ಪಡೆದರು. ದೇವಾಲಯದ ಶಾಲಾ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿ, ಪಟ್ಟನಾಯ್ಕನಹಳ್ಳಿ ನಂಜಾವಧೂತ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಎನ್.ಶ್ರೀನಿವಾಸ್, ಎಂಎಲ್ಸಿ ಪುಟ್ಟಣ್ಣ, ಸಪ್ತಗಿರಿ ವಿದ್ಯಾಸಂಸ್ಥೆ, ವೈದ್ಯಕಿಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ದಯಾನಂದ್ ಸೇರಿ ಅನೇಕ ಗಣ್ಯರಿಗೆ ಬಸವಣ್ಣ ಅಚ್ಚುಮೆಚ್ಚಾಗಿತ್ತು.