ವಿಜಯವಾಣಿ ಸುದ್ದಿಜಾಲ ನೆಲಮಂಗಲ
ತಿರುಪತಿಯಿಂದ ಬಂದಿದ್ದ ದಂಪತಿ ಪೈಕಿ ಮಹಿಳೆಯೊಬ್ಬರು ನಗರದ ಅಡೇಪೇಟೆಯ ಸಂಬಂಧಿಕರ ಮನೆಯಲ್ಲಿನ ಸ್ನಾನದಕೊಠಡಿಯಲ್ಲಿ ಅನುಮಾಸ್ಪದವಾಗಿ ಮೃತಪಟ್ಟಿದ್ದಾರೆ.
ಆಂಧ್ರದ ತಿರುಪತಿ ನಿವಾಸಿ ಲಕ್ಷ್ಮೀ (25) ಮೃತೆ. ನ.23 ರಂದು ಆಂದ್ರ ಪ್ರದೇಶದ ತಿರುಪತಿಯಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿಂದ ನೆಲಮಂಗಲ ನಗರದ ಅಡೇಪೇಟೆಯಲ್ಲಿನ ಸಂಬಂಧಿಕರಾದ ಸುಹಾನಿ ಎಂಬಾತರ ಮನೆಗೆ ದಂಪತಿ ಬಂದಿದ್ದರು. ನ.24 ರಂದು ಬೆಳಗ್ಗೆ 11ರ ಸಮಯದಲ್ಲಿ ಲಕ್ಷ್ಮೀ ಸ್ನಾನದ ಕೊಠಡಿಗೆ ತೆರಳಿದ್ದರು. 20 ನಿಮಿಷವಾದರೂ ಹೊರ ಬರದ ಹಿನ್ನೆಲೆಯಲ್ಲಿ ಪತಿ ವೆಂಕಟಸ್ವಾಮಿ ಸ್ನಾನ ಕೊಠಡಿ ಬಳಿಗೆ ತೆರಳಿ ನೋಡಿದ್ದಾಗ ಪ್ರಜ್ಞಾಹೀನಳಾಗಿ ಬೆತ್ತಲೆ ಸ್ಥಿತಿಯಲ್ಲಿ ಲಕ್ಷ್ಮೀ ಕೆಳಗೆ ಬಿದ್ದಿದ್ದ ದೃಶ್ಯ ಕಂಡುಬಂದಿತ್ತು. ಸಂಬಂಧಿಕರ ಸಹಾಯದಿಂದ ಪತ್ನಿಯನ್ನು ಬಿನ್ನಮಂಗಲ ಬಳಿಯ ಖಾಸಗಿ ಆಸ್ಪತ್ರೆ ರವಾನಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಪತ್ನಿ ಕೊನೆಯುಸಿರೆಳೆದಿದ್ದಳು ಎನ್ನಲಾಗಿದೆ.
ಪ್ರಕರಣ ಸಂಬಂಧ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ರವಾನಿಸಿದ್ದಾರೆ.
ಪರಚಿದ ಗಾಯ: ಸ್ನಾನಕ್ಕೆ ಹೋದ ಮಹಿಳೆ ಕೆಲವೇ ನಿಮಿಷದಲ್ಲಿ ಮೃತ ಪಟ್ಟಿದ್ದಾಳೆ. ಸ್ನಾನಕ್ಕೆ ಹೋಗುವ ಮುನ್ನ ಲಕ್ಷ್ಮೀ ಮುಖಕ್ಕೆ ಏನು ಆಗಿರಲಿಲ್ಲ. ಸ್ನಾನಗೃಹದಲ್ಲಿ ಬೆತ್ತಲೆಯಾಗಿ ಬಿದ್ದಿದ್ದ ಮಹಿಳೆ ಮುಖಕ್ಕೆ ಪರಚಿದ ಗಾಯವಾಗಿದೆ. ಮನೆಯಲ್ಲಿ ಯಾರು ಬಂದಿಲ್ಲ ಸ್ನಾನದ ಮನೆಯಲ್ಲಿ ಗ್ಯಾಸ್ ಗೀಸರ್ ಆನ್ ಆಗಿಲ್ಲ,
ಬಕೆಟ್‌ನಲ್ಲಿ ನೀರು ತುಂಬಿಸಿಲ್ಲ ಎನ್ನಲಾಗಿದ್ದು, ಲಕ್ಷ್ಮೀ ನಿಗೂಢ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.