ಜಿಲ್ಲೆ

ವಾಹನಗಳ ಅಪಘಾತದಲ್ಲಿ ಸಾವು

ಕೋಲಾರ ಡೆಸ್ಕ್

ಕೋಲಾರ: ರಾಷ್ಟ್ರೀಯ ಹೆದ್ದಾರಿ 75ರ ತಾಲೂಕಿನ ಮಡೇರಹಳ್ಳಿ ಗೇಟ್​ ಬಳಿ ಬುಧವಾರ ರಾತ್ರಿ ಹಾಲಿನ ಟ್ಯಾಂಕರ್​ ಹಾಗೂ ಬೊಲೆರೊ ನಡುವೆ ಸಂಭವಿಸಿದ ಅಪಘಾತದಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೊಲೆರೊ ವಾಹನದಲ್ಲಿದ್ದ ಬೆಂಗಳೂರಿನ ವಿಜಯ್​ಕುಮಾರ್​ ಮೃತ. ಅಪಘಾತದ ರಭಸಕ್ಕೆ ಬೊಲೆರೊ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹವು ವಾಹನದಲ್ಲೇ ಸಿಲುಕಿಕೊಂಡಿತ್ತು.ಅದನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕೋಲಾರ ಗ್ರಾಮಾಂತರ ಠಾಣೆೆಯ ಪಿಎಸ್​ಐ ಭಾರತಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರ