ಜಿಲ್ಲೆ

ಚಿಕಿತ್ಸೆ ಫಲಕಾರಿಯಾಗದೆ ಸಾವು

ಎನ್.ವೆಂಕಟೇಶ್

ಚಿಂತಾಮಣಿ: ಬೆಂಗಳೂರು&ಚಿಂತಾಮಣಿ ಹೆದ್ದಾರಿಯ ತಳಗವಾರ&ಜೋಡಿ ಹೊಸಹಳ್ಳಿಯ ಮಧ್ಯೆ ಮಂಗಳವಾರ ಸಂಜೆ ಅಪರಿಚಿತ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದ ಬೈಕ್​ ಸವಾರ ಹೊಸಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶದ ಅಲೆಗಲ್​ ಜಿಲ್ಲೆ ಅತ್ರೋಲಿ ತಾಲೂಕಿನ ವಾಸನಗ ಮಂದಿರ್​ ಗ್ರಾಮದ ನಿವಾಸಿ ಗೌರವ್​ ಕುಮಾರ್​ (23) ಮೃತ. ಚಿಂತಾಮಣಿ ನಗರದ ಹೊರ ವಲಯದ ಶ್ರೀನಿವಾಸಪುರ ರಸ್ತೆಯ ಗೋಪಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಬಟ್ಟೆ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ. ಬಟ್ಟೆ ವ್ಯಾಪಾರ ಮುಗಿಸಿ ಮಂಗಳವಾರ ಸಂಜೆ ವಾಪಸ್​ ಬರುತ್ತಿದ್ದಾಗ ಅಪರಿಚಿತ ವಾಹನ ಬೈಕಿಗೆ ಡಿಕ್ಕಿ ಹೊಡೆದು ಗೌರವ್​ ಕುಮಾರ್​ ಗಾಯಗೊಂಡಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀೆ ನಡೆಸಿದ ನಂತರ ಶವವನ್ನು ಕುಟುಂಬಕ್ಕೆ ಒಪ್ಪಿಸಿದ್ದು, ಬಳಿಕ ಉತ್ತರ ಪ್ರದೇಶಕ್ಕೆ ಕೊಂಡೊಯ್ದರು.